ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತಾಲೂಕಲ್ಲಿ ಕೆಜೆಪಿ ಧ್ವಜ ಹಾರಿಸಿ: ಮಲ್ಕಾಪುರ

Lingaraj Badiger
Updated On : 3 Apr 2013, 11:23 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.2
ತಾಲೂಕಿನಲ್ಲಿ ಕರ್ನಾಟಕ ಜನತಾ ಪಕ್ಷದ ಧ್ವಜವನ್ನು ಹಾರಿಸಿ ರಾಜಶೇಖರ ಪಾಟೀಲರನ್ನು ವಿಧಾನಸಭೆಗೆ ಕಳುಹಿಸಬೇಕೆಂದು ಕೆಜೆಪಿ ನೂತನ ಜಿಲ್ಲಾಧ್ಯಕ್ಷ ವೆಂಕನಗೌಡ ಮಲ್ಕಾಪುರ ಕರೆ ನೀಡಿದರು.
ನಗರದಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾವು ಮಲ್ಕಾಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಿಂದ ಬಂದವರಾಗಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೆಜೆಪಿ ರಾಜ್ಯ ಉಪಾಧ್ಯಕ್ಷ ಬಸವರಾಜ ಪಾಟೀಲ್ ಅನ್ವರಿ ಅವರ ಸಹಕಾರದೊಂದಿಗೆ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದು ಸಂತಸ ತಂದಿದೆ. ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಯಡಿಯೂರಪ್ಪನವರ ಮೂರೂವರೆ ವರ್ಷದ ಸಾಧನೆಗಳನ್ನು ಹೇಳುವ ಮೂಲಕ ಪಾಟೀಲರ ಗೆಲವಿಗೆ ಕಾರಣರಾಗಬೇಕೆಂದು ಹೇಳಿದರು.
ಕೆಜೆಪಿ ಸೇರ್ಪಡೆ: ಇದೇ ವೇಳೆ ಜೆಡಿಎಸ್ ಎಸ್‌ಟಿ ಘಟಕದ ಅಧ್ಯಕ್ಷರಾಗಿದ್ದ ಕುಪೇಂದ್ರ ನಾಯಕ ತಮ್ಮ ನೂರಾರು ಬೆಂಬಲಿಗರೊಡನೆ ಕೆಜೆಪಿಗೆ ಸೇರ್ಪಡೆಗೊಂಡರು. ಅವರನ್ನು ಕೆಜೆಪಿಯ ಎಸ್‌ಟಿ ಘಟಕದ ಅಧ್ಯಕ್ಷರೆಂದು ಜಿಲ್ಲಾಧ್ಯಕ್ಷರು ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು. ವಿಶ್ವಕರ್ಮ ಸಮಾಜದ ತಾಲೂಕು ಉಪಾಧ್ಯಕ್ಷ ಶಂಕ್ರಪ್ಪ ತಮ್ಮ ಅಪಾರ ಬೆಂಬಲಿಗರೊಡನೆ ಪಕ್ಷ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮುಖಂಡರಾದ ಪಗಡದಿನ್ನಿ ರುದ್ರಗೌಡ, ಚಿದಾನಂದಯ್ಯಸ್ವಾಮಿ ಅಲಬನೂರು, ಬೆನ್ನೂರು ಶರಣೇಗೌಡ, ನಗರಸಭೆ ಸದಸ್ಯರಾದ ಲಿಂಗರಾಜ ಹೂಗಾರ, ಹಾಜಿಮಸ್ತಾನ, ಮಲ್ಲಿಕಾರ್ಜುನ ಪಾಟೀಲ್, ಶಾರದಾ ಜಗದೀಶ, ಸೈಲಾನಿ ಪಾಷ, ಅನ್ವರ್ ಪಾಷ, ಭರತ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮುಖಂಡ ಎಂ.ಡಿ. ನದೀಮುಲ್ಲಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement