ಸಮಾಜ ಸೇವೆಯಿಂದ ಸದಾ ಸುಖಿ ಜೀವನ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.3
ಸ್ವಾರ್ಥದಿಂದ ದುಃಖ ತೀವ್ರಗೊಳ್ಳುತ್ತದೆ. ಆದರೆ ಸಮಾಜ ಸೇವೆಯಿಂದ ಸದಾ ಸುಖಿಯಾಗಿರಲು ಸಾಧ್ಯ. ಇದು ವೈಜ್ಞಾನಿಕ ನಿರೂಪಿತ ಸತ್ಯ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಯುವ ಪ್ರಭಾರಿ ಎಂ. ಭಾಸ್ಕರ್ ಹೇಳಿದರು.
ನಗರದ ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಹೋಳಿ ಹಬ್ಬದ ಪ್ರಯುಕ್ತ ನಡೆದ ವಿಶೇಷ ಯೋಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಚಿಂತನೆ: ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪತಂಜಲಿ ಯೋಗ ಸಮಿತಿಯ ರಾಜ್ಯ ಮಹಿಳಾ ಪ್ರಭಾರಿ ದಾಕ್ಷಾಯಣಿ ಹೊಸಪೇಟೆ ಮಾತನಾಡಿ, ನಿರಂತರ ಯೋಗ ಸಾಧನೆಯಿಂದ ಮಹಿಳೆ ತನ್ನ ವೈಯುಕ್ತಿಕ ಚಿಂತೆಗಳನ್ನು ದೂರಗೊಳಿಸಿ ಸಾಮಾಜಿಕ ಚಿಂತನೆಗೆ ಅಣಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ಜೀವನ ಚುಟುಕು ಇದ್ದಂತೆ. ಸ್ವಲ್ಪವೇ ಇದ್ದರೂ ಅರ್ಥಪೂರ್ಣ ಸಾಧನೆ ಮಾಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರಸಭೆ ಸದಸ್ಯೆ ಸುಮಂಗಲಾ, ಜನರು ತಮ್ಮ ಮೇಲಿಟ್ಟ ಪ್ರೀತಿ ವಿಶ್ವಾಸಕ್ಕೆ ತಕ್ಕಂತೆ ಜನತೆಯ ಮಾರ್ಗದರ್ಶನದಲ್ಲಿ ಸದಾ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವೆಂಕಣ್ಣಾಚಾರ ಜೋಷಿ ದೋಟಿಹಾಳ, ಆನಂದ ಜೀರವಾಲ, ಹಾಜರಿದ್ದರು.
ಸನ್ಮಾನ: ನಗರಸಭೆ ಸದಸ್ಯ ಪ್ರಭುರಾಜ, ನಗರಸಭೆ ನೂತನ ಸದಸ್ಯೆಯರಾದ ಆಶಾಬೀ ಅಕ್ತರಸಾಬ, ನೃತ್ಯ ನಿರ್ದೇಶಕ ಬಸವರಾಜರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಆದರ್ಶ ಕಾಲನಿ ನಿರಂತರ ಯೋಗ ಕೇಂದ್ರದ ಅಧ್ಯಕ್ಷ ಶಂಕರ ಶೆಟ್ಟಿ, ದತ್ತಾತ್ರೇಯ ಬಾದಲರ್, ಯೋಗ ಶಿಕ್ಷಕಿ ಕೆ. ಧನಲಕ್ಷ್ಮಿ ಮಮತಾ ಹಿರೇಮಠ, ರಮಾದೇವಿ ಶಂಭೋಜಿ, ಗೀತಾ ಭಾಸ್ಕರ್, ಮರೇಗೌಡ, ಮೇನಕಾದೇವಿ, ನರೇಶಕುಮಾರ, ಪ್ರೀತಿ, ಲಲಿತಾ, ಸೌಭಾಗ್ಯಲಕ್ಷ್ಮಿ, ರಾಜಶ್ರೀ ಇರಕಲ್, ವಿಮಲಾವಾಣಿ, ಸುಕನ್ಯಾ, ವನಿತಾ ಶೆಟ್ಟಿ, ಟಿ.ಬಿ. ಬಡಿಗೇರ್, ಅಮರಗುಂಡಪ್ಪ, ಎಚ್. ಶ್ರೀನಿವಾಸ, ಸುಬ್ಬಾರಾವು, ವೆಂಕೋಬಣ್ಣ, ಮಲ್ಲಿಕಾರ್ಜುನ, ಗಂಗಾಧರ, ಕುಬೇರಪ್ಪ, ಅಪ್ಪಣ್ಣ, ಕಲ್ಯಾಣ ಕುಮಾರ, ಗದ್ದೆಪ್ಪ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ವಚನಗೀತಾ ಸಾಲಿಮಠ ನಿರೂಪಿಸಿದರು. ಬಸಮ್ಮ ಪ್ರಾರ್ಥಿಸಿದರು.