ಸಿದ್ದು ಆರೋಗ್ಯ ಸುಧಾರಣೆಗೆ ಪೂಜೆ
ರಾಯಚೂರು: ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ನಗರದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಅವರ ಅಭಿಮಾನಿಗಳ ಸಂಘದಿಂದ ಗುರುವಾರ ವಿಶೇಷ ಪೂಜೆ ಕ್ಷೀರಾಭಿಷೇಕ ನೆರವೇರಿಸಲಾಯಿತು.
ಸಂಘದ ಪ್ರಮುಖರು ದೇವಾಲಯಕ್ಕೆ ಬೆಳಗ್ಗೆ ಆಗಮಿಸಿ ದೇವರಿಗೆ ಕ್ಷೀರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಿ ವಿಧಾನಸಭೆ ಚುನಾವಣೆಯ ನೇತೃತ್ವವಹಿಸಿ ಮುಂದಿನ ಸಿಎಂ ಆಗುವಂತೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಏಗನೂರು, ನಾಗೇಂದ್ರಪ್ಪ ಮಟಮಾರಿ, ವೆಂಕಟೇಶ್ ಹೀರಾ, ಸತ್ಯಕುಮಾರ್, ಸಿದ್ದನಗೌಡ ಗಾರಲದಿನ್ನಿ, ನರಸನಗೌಡ, ಎಂ. ಈರಣ್ಣ, ಕೆ. ನಾಗರಾಜ ಸೇರಿದಂತೆ ಅನೇಕರು ಇದ್ದರು.