ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ದಲ್ಲಾಳಿ ಪಕ್ಷಗಳಿಗೆ ಪಾಠ ಕಲಿಸಿ'

Vishwanath S
Updated On : 7 Apr 2013, 1:19 am

ಸಿಂಧನೂರು: ಜನದ್ರೋಹಿ ದಲ್ಲಾಳಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಪಕ್ಷಗಳನ್ನು ಜನಪರ ವಿಚಾರಗಳ ಬಿಚ್ಚುಗತ್ತಿಯನ್ನು ಎತ್ತಿ ಹಿಡಿದು ಹೋರಾಟ ಮಾಡುವ ಮೂಲಕ ಚುನಾವಣೆಯಲ್ಲಿ ಮಣ್ಣುಮುಕ್ಕಿಸುವಂತೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಕಿ ಕರೆ ನೀಡಿದರು.
ನಗರದ ಜನತಾ ಕಾಲೋನಿಯ ಕಲ್ಯಾಣ ಮಂಟಪದಲ್ಲಿ ಜರುಗಿದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ರಾಂತಿಕಾರಿ ಪಕ್ಷದ ಜನಪರ ಮೇಲೆಂಬುದನ್ನು ಚುನಾವಣೆಯಲ್ಲಿ ಸಾಬೀತುಪಡಿಸುವ ಮೂಲಕ ತಕ್ಕಪಾಠ ಕಲಿಸುವಂತೆ ಹೇಳಿದರು.
ಎಚ್.ಎನ್. ಬಡಿಗೇರ ಮಾತನಾಡಿ, ಲೂಟಿಕೋರ ಪಕ್ಷಗಳನ್ನು ಸದೆಬಡಿದು ನಿರ್ನಾಮ ಮಾಡಿ ಕ್ರಾಂತಿಕಾರಿ ಪಕ್ಷದ ಗೆಲುವಿಗೆ ಶ್ರಮ ವಹಿಸಲು ಕಾರ್ಯಕರ್ತರಿಗೆ ಕರೆ ನೀಡಿದರು.
ನಾಗರಾಜ ಪೂಜಾರ್ ಮಾತನಾಡಿ, ಚುನಾವಣೆಯ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಜನದ್ರೋಹಿ ಪಕ್ಷಗಳಿಗೆ ಪ್ರತಿ ಸವಾಲು ಎಸೆದು ಸಿಪಿಎಂ ಗೆಲವಿಗೆ ಹೆಗಲೊಡ್ಡಿ ಎಂದರು.
ಪ್ರತಿ ಜನರ ಮನೆಗೆ ಪಕ್ಷದ ಜನಪರ ವಿಷಯಗಳನ್ನು ತಲುಪಿಸಿ ಮತಯಾಚಿಸಿರಿ ಎಂದರು.
ಬಸವರಾಜ ಹೊಸಳ್ಳಿ, ತಾಲೂಕು ಕಾರ್ಯದರ್ಶಿ ಹಾಗೂ ಸಿಂಧನೂರು ಕ್ಷೇತ್ರದ ಅಭ್ಯರ್ಥಿ ಸಿಪಿಐಎಂಎಲ್ ಅಭ್ಯರ್ಥಿ ರಮೇಶ ಪಾಟೀಲ್ ಬೇರ್ಗಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement