ವಿಜ್ಞಾನ ಪ್ರತಿಭಾ ಪುರಷ್ಕಾರ ಶಿಷ್ಯವೇತನಕ್ಕೆ ಆಯ್ಕೆ
ಸಿಂಧನೂರು: ಭಾರತ ಸರ್ಕಾರದ ಸಹಯೋಗದಲ್ಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90 ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಮೂಲ ವಿಜ್ಞಾನದ ಬಿ.ಎಸ್ಸಿ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಗುವ ಸರ್ಕಾರದ ವಿಶೇಷ ಶಿಷ್ಯವೇತನ 80,000- (ಎಂಬತ್ತು ಸಾವಿರ) ಪ್ರತಿ ವರ್ಷಕ್ಕೆ ಪದವಿ ಅವಧಿಯ 5 ವರ್ಷಗಳ (ಸ್ನಾತಕೊತ್ತರ ಪದವಿ ಸೇರಿ) ವರೆಗೆ 4,00,000- (ನಾಲ್ಕು ಲಕ್ಷ) ಶಿಷ್ಯವೇತನ ಗೌರವಕ್ಕೆ ದುದ್ದುಪೂಡಿ ಮಹಿಳಾ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಕು. ಸೋನಲ್ ಲೋಧಾ 91.33 (2010-11) ಮತ್ತು ಕು. ರೇಖಾ ಗೊರೇಬಾಳ 93.16 (2011-12)ಅಂಕಗಳನ್ನು ಪಡೆದು ಸರ್ಕಾರದ ವಿಶೇಷ ಶಿಷ್ಯವೇತನಕ್ಕೆ ಅರ್ಹರಾಗಿ ಗೌರವ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಹಾಗೂ ವಿಜ್ಞಾನ ವಿಭಾಗದ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ವಿಶ್ವವಿದ್ಯಾಲಯಕ್ಕೆ ಕೇವಲ 20 ವಿದ್ಯಾರ್ಥಿಗಳಿಗೆ ನೀಡಲಾಗುವ ವಿಜ್ಞಾನ ವಿಭಾಗಕ್ಕೆ 7500- ಶಿಷ್ಯವೇತನಕ್ಕೆ ದುದ್ದುಪೂಡಿ ಮಹಿಳಾ ಮಹಾವಿದ್ಯಾಲಯದ 8 ವಿದ್ಯಾರ್ಥಿನಿಯರು ಅರ್ಹರಾಗಿ ಶಿಷ್ಯವೇತನ ಗೌರವ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.