ಶ್ರೀಶೈಲಂಗೆ ವಿಶೇಷ ಬಸ್ ಸೌಲಭ್ಯ
ರಾಯಚೂರು: ಯುಗಾದಿ ಹಬ್ಬದ ಪ್ರಯುಕ್ತ ಏ.5ರಿಂದ ಏ.15ರವರೆಗೆ ಆಂಧ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಶೈಲಂಗೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ, ಶ್ರೀಶೈಲಂ ಜಾತ್ರೆಗೆ ವಿವಿಧ ಸ್ಥಳಗಳಿಂದ ಪ್ರಯಾಣಿಕರು ಹೋಗಿ ಬರಲು ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಿದ್ದು, ಬಸ್ಗಳು ಲಿಂಗಸ್ಗೂರು-ಶ್ರೀಶೈಲಂ, ರಾಯಚೂರು- ಮಂತ್ರಾಲಯ- ಶ್ರೀಶೈಲಂ, ಸಿಂಧನೂರು-ಆದೋನಿ-ಶ್ರೀಶೈಲಂ, ರಾಯಚೂರು- ಗದ್ವಾಲ್- ಶ್ರೀಶೈಲಂಗೆ ಬಸ್ಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.