ಸಕಾಲ ಸೇವೆ: ಆಸಕ್ತರಿಂದ ಅರ್ಜಿ ಕರೆ
ರಾಯಚೂರು: ಕರ್ನಾಟಕ ಸರ್ಕಾರದ ಸಕಾಲ ಸೇವೆಯಡಿ ಸೇವೆ ಸಲ್ಲಿಸಲು ಆಸಕ್ತ ಪೋಟೋ ಸ್ಟುಡಿಯೋ, ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡುತ್ತಿರುವ ಹಾಗೂ ಆನ್‌ಲೈನ್ ಟಿಕೆಟ್ ನೀಡುವ ಕೇಂದ್ರಗಳಿಂದ ಅರ್ಜಿ ಕರೆಯಲಾಗಿದೆ.
ಅಂತರ್ಜಾಲ ಸಂಪರ್ಕ ಹೊಂದಿರುವ ಕೇಂದ್ರ ಸೈಬರ್ ಕೆಫೆ, ವೆಬ್ ಪಾರ್ಲರ್ ಜತೆಗೆ ಸ್ಕ್ಯಾನರ್ ಮತ್ತಿತರೆ ಸಾಮಗ್ರಿ ವ್ಯವಸ್ಥೆಯುಳ್ಳ ಗಣಕ ಯಂತ್ರ, ಮುದ್ರಣ ಸಾಮಗ್ರಿ, ಅಂತರ್ಜಾಲದ ಮುಖಾಂತರ ದೃಶ್ಯ ಗ್ರಹಿಸುವ ವೆಬ್‌ಕ್ಯಾಮ್ ಸೌಲಭ್ಯ ಹೊಂದಿರುವವರು ಹಾಗೂ ಬಯೋವುಟ್ರಿಕ್ಸ್ ತಂತ್ರಜ್ಞಾನದ ಸಾಮಗ್ರಿಗಳಿರುವವರು ಅರ್ಜಿ ಸಲ್ಲಿಸಬಹುದು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಕ್ತಿಗಳಾಗಲಿ ಅಥವಾ ಕೇಂದ್ರಗಳಾಗಿ ತಮ್ಮ ಅರ್ಜಿಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳ ಕಚೇರಿಗಳಿಂದ ಅರ್ಜಿ ಪಡೆದು 15 ದಿನದಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.