ಸಮಾಜಸೇವೆ ಆಶಯದೊಂದಿಗೆ ರಾಜಕೀಯಕ್ಕೆ: ನಟಿ ಪೂಜಾಗಾಂಧಿ
ರಾಯಚೂರು: ಚಿತ್ರರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಸಮಾಜದ ಎಲ್ಲ ಮಗ್ಗುಲುಗಳನ್ನು ಅರಿತಿದ್ದು, ಸಮಾಜ ಸೇವೆಯ ಆಶಯದೊಂದಿಗೆ ರಾಜಕೀಯಕ್ಕೆ ಬಂದಿದ್ದಾಗಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ಹಾಗೂ ನಟಿ ಪೂಜಾ ಗಾಂಧಿ ತಿಳಿಸಿದರು.
ಮಾನವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಚೂರಿನಲ್ಲಿ ಸ್ಪರ್ಧಿಸಲು ಪಕ್ಷದ ನಾಯಕ ಶ್ರೀರಾಮುಲು ಸೂಚಿಸಿದ್ದು, ಅವರ ಸೂಚನೆಯಂತೆ ಕಣಕ್ಕಳಿಯುತ್ತಿರುವುದಾಗಿ ತಿಳಿಸಿದರು.,
ಚುನಾವಣೆಯನ್ನು ಸಲಾವಾಗಿ ಸ್ವೀಕರಿಸಿದ್ದೇನೆ. ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸಿ ಆಯ್ಕೆ ಮಾಡಿದರೆ ರಾಯಚೂರು ನಗರದಲ್ಲಿಯೇ ವಾಸವಾಗಿದ್ದು ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ತಮ್ಮ ಮೊದಲಾದ್ಯತೆಯಾಗಿದೆ. ಕಳೆದ 7 ವರ್ಷಗಳಿಂದ ಕರ್ನಾಟಕದಲ್ಲಿದ್ದು 35 ಚಿತ್ರಗಳಲ್ಲಿ ಅಭಿನಯಿಸಿದ್ದು, ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ.
ರಾಜಕೀಯ ಕ್ಷೇತ್ರದಲ್ಲಿ ತಾವು ಬಹುದೊಡ್ಡ ನಾಯಕಿಯಲ್ಲದಿದ್ದರೂ ಚುನಾವಣೆಯಲ್ಲಿ ಗೆಲ್ಲಲು ಶ್ರಮಿಸುವುದಾಗಿ ಹೇಳಿದರು.