ಎಸ್ಬಿಎಚ್ 72ನೇ ಸಂಸ್ಥಾಪನಾ ದಿನ
ಸಿಂಧನೂರು: ಸ್ಟೇಟ್ಬ್ಯಾಂಕ್ ಆಫ್ ಹೈದರಾಬಾದ್ನ 72ನೇ ಸಂಸ್ಥಾಪನಾ ದಿನಾಚರಣೆಯನ್ನು ಎಸ್.ಬಿ.ಎಚ್ ಮುಖ್ಯ ಶಾಖೆಯಲ್ಲಿ ಆಚರಿಸಲಾಯಿತು. ಈ ಸಂಬಂಧ ಬ್ಯಾಂಕಿನ ಗ್ರಾಹಕರ ಜೊತೆ ಸಮಾವೇಶಮೊಂದನ್ನು ಏರ್ಪಡಿಸಲಾಗಿತ್ತು.
ಶಾಖೆಯ ವ್ಯವಸ್ಥಾಪಕರಾದ ರಮೇಶ ಹೀರಾ ಅವರು ಈ ಸಂದರ್ಭದಲ್ಲಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿ, ಬ್ಯಾಂಕಿನ ವಿವಿಧ ಸೇವೆ ಸೌಲಭ್ಯಗಳ ಲಾಭ ಪಡೆಯುವಂತೆ ಕೋರಿದರು.
ಸಭೆಯಲ್ಲಿ ಮಾತನಾಡಿದ ಗ್ರಾಹಕರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಸ್ಬಿಎಚ್ ಸಲ್ಲಿಸುತ್ತಿರುವ ಸೇವೆಯನ್ನು ಪ್ರಶಂಸಿಸಿದರಲ್ಲದೇ ಬ್ಯಾಂಕ್ ಇದೀಗ ಎರಡು ಲಕ್ಷ ಕೋಟಿ ರೂ ವ್ಯವಹಾರವನ್ನು ದಾಟಿ ಸಾಗಿರುವುದನ್ನು ಶ್ಲಾಘೀಸಿದರು. ಸಿಂಧನೂರು ಎಪಿಎಂಸಿ ನಿರ್ದೇಶಕರಾದ ತಾವರಗೆರೆ ಪಂಪನಗೌಡ, ಕಾನಿಹಾಳ ಅಮರೇಗೌಡ, ದೇವರೆಡ್ಡಿ, ಸೇನಾ ಅಧಿಕಾರಿ ಕರ್ನಲ್ ವೆಂಕಟೇಶ ಕುಲಕರ್ಣಿ, ಆರ್.ಕೆ. ಎಂಟರ್ ಪ್ರೈಸೆಸ್ನ ಕೌಶಿಕ್ ಇನ್ನಿತರ ಗ್ರಾಹಕರು ಮಾತನಾಡಿದರು. ಅಧಿಕಾರಿ ಕೆ.ಶ್ರೀನಿವಾಸ ಗಟ್ಟು ಸ್ವಾಗತಿಸಿದರು.
ಸಿಬ್ಬಂದಿ ಸಂಘದ ಕಾರ್ಯದರ್ಶಿ ಅನುರಾಗ ತೇಲಂಗ್ ವಂದಸಿದರು. ಸಭೆಯಲ್ಲಿ ಗ್ರಾಹಕರು ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.