ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಣ್ಗಾವಲು ಸಮಿತಿ

Lingaraj Badiger
Updated On : 9 Apr 2013, 11:25 am

ರಾಯಚೂರು: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಮೆ. 5ರಂದು ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಚುನಾವಣಾ ಜಾಹೀರಾತುಗಳ ಪ್ರಮಾಣೀಕರಣ ಹಾಗೂ ಇತರೆ ಮಾಧ್ಯಮ ಸಂಬಂಧದ ಕರ್ತವ್ಯ ನಿರ್ವಹಣೆಗೆ ಜಿಲ್ಲಾ ಮಾಧ್ಯಮ ಪ್ರಮಾಣಿಕರಣ ಹಾಗೂ ಕಣ್ಗಾವಲು ಸಮಿತಿ ರಚಿಸಿ ಜಿಲ್ಲಾ ಚುನಾವಣಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಆದೇಶ ಹೊರಡಿಸಿದ್ದಾರೆ.ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ರಾಯಚೂರು ಸಹಾಯಕ ಆಯುಕ್ತೆ ಮಂಜುಶ್ರೀ, ರಾಯಚೂರಿನ ದೂರದರ್ಶನ ಕೇಂದ್ರದ ನಿಲಯದ ನಿರ್ದೇಶಕರು ಹಾಗೂ ಹಿರಿಯ ವರದಿಗಾರ ಕೆ.ರಾಮಕೃಷ್ಣ ಅವರು ಸದಸ್ಯರಾಗಿರುತ್ತಾರೆ. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕನುಮಪ್ಪ ಸದಸ್ಯ ಕಾರ್ಯದರ್ಶಿಯಾಗಿದ್ದಾರೆಂದು ತಿಳಿಸಿದ್ದಾರೆ.ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷದವರು, ಅಭ್ಯರ್ಥಿಗಳ ಬೆಂಬಲಿಗರು, ಅಭ್ಯರ್ಥಿಗಳ ಅನುಮತಿ ಪಡೆದು ಮಾಧ್ಯಮ, ಪತ್ರಿಕೆಗಳಿಗೆ ಜಾಹೀರಾತು ನೀಡಬೇಕಾದಲ್ಲಿ ಸಮಿತಿ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಿ ಸಮಿತಿಯಿಂದ ಅನುಮೋದನೆ ಪಡೆದ ನಂತರವೇ ಜಾಹೀರಾತು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
'ರಜೆ ಪಡೆಯದಿರಿ'
ರಾಯಚೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಶಿಕ್ಷಣ ಇಲಾಖೆಯ ಅಧೀನದಲ್ಲಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ಮುಖ್ಯಸ್ಥರು ಹಾಗೂ ಸಿಬ್ಬಂದಿಯವರು ಬೇಸಿಗೆ ರಜೆಯ ಸಂದರ್ಭ ಚುನಾವಣೆ ನಡೆಯುವ ಪ್ರಯುಕ್ತ ಚುನಾವಣಾಧಿಕಾರಿಯವರ ಅನುಮತಿಯಿಲ್ಲದೇ ರಜೆ ಪಡೆಯದಂತೆ ಡಿಡಿಪಿಐ ಸೂಚಿಸಿದ್ದಾರೆ. ಯಾವುದೇ  ಕಾರಣಕ್ಕೂ ರಜೆ ಹಾಗೂ ಕೇಂದ್ರ ಸ್ಥಾನ ಬಿಡವಂತಿಲ್ಲವೆಂದು ಸೂಚಿಸಿರುವ ಅವರು, ಆದೇಶ ಉಲ್ಲಂಘಿಸಿದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಜಿಲ್ಲಾ ಚುನಾವಣಾಧಿಕಾರಿಗಳನ್ನು ಕೋರಲಾಗುವುದು ಎಂದು ಎಚ್ಚರಿಸಿದ್ದಾರೆ.
ಚುನಾವಣೆ:  ಸೂಚನೆ
ರಾಯಚೂರು: ವಿಧಾನಸಭೆ ಚುನಾವಣೆಯ ಪೂರ್ವ ಸಿದ್ಧತೆಗಳು ಜಾರಿಯಲ್ಲಿರುವುದರಿಂದ ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನವಿ, ದೇವದುರ್ಗ ವಿಧಾನಸಭೆ ಕ್ಷೇತ್ರದ ಮತದಾನ ಕೇಂದ್ರಗಳ ಮತಗಟ್ಟೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಸಹಾಯಕ ಆಯುಕ್ತೆ ಮಂಜುಶ್ರೀ ಸೂಚಿಸಿದ್ದಾರೆ. ಮತಗಟ್ಟೆಗಳ ಅಧಿಕಾರಿಗಳು ಯಾವ ಕಾರಣಕ್ಕೂ ರಜೆ ಪಡೆಯುವಂತಿಲ್ಲ. ರಜೆ ಮಂಜೂರು ಮಾಡುವ ಅಧಿಕಾರಿಗಳು ರಜೆ ನೀಡದಂತೆ ಆದೇಶಿಸಿದ್ದು, ತುರ್ತು ಸಂದರ್ಭ ಹೊರತುಪಡಿಸಿ ರಜೆ ನೀಡುವಂತಿಲ್ಲ. ರಜೆ ನೀಡುವ ಮೊದಲು ಆಯಾ ಪ್ರದೇಶದ ತಹಸೀಲ್ದಾರ್ ಅನುಮತಿ ಪಡೆಯಲು ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement