ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಬಿಜೆಪಿ ಸರ್ಕಾರದ ಸಾಧನೆಗಳೇ ತಮಗೆ ಶ್ರೀರಕ್ಷೆ'

Lingaraj Badiger
Updated On : 9 Apr 2013, 11:24 am

ಕನ್ನಡ ಪ್ರಭವಾರ್ತೆ, ಸಿಂಧನೂರು, ಏ.8
ಬಿಜೆಪಿ ಸರ್ಕಾರದ ಸಾಧನೆಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಶಿವನಗೌಡರ ನಿವಾಸದಲ್ಲಿ ಭಾನುವಾರ ಬಿಜೆಪಿ ಮುಖಂಡರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಾವು ವಲಸಿಗರಲ್ಲ. ಕಾರಟಗಿ ಬಳಿಯ ದೇವಿಕ್ಯಾಂಪ್ನವರು. ತಮ್ಮ ಹೊಲಗಳು ಸಿಂಧನೂರು ತಾಲೂಕಿನ ಚನ್ನಳ್ಳಿ ಸೀಮಾದಲ್ಲಿವೆ. ಪಕ್ಷದಲ್ಲಿ ಯಾವುದೇ ಭಿನ್ನಮತ, ಗುಂಪುಗಾರಿಕೆ ಇಲ್ಲ. ಪಕ್ಷದ ಎಲ್ಲಾ ಮುಖಂಡರು ತಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ತಮಗೆ ನೇರ ಪ್ರತಿಸ್ಪರ್ಧೆ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ರೈತರ ಭಾಗ್ಯದ ಬಾಗಿಲು ಸರ್ಕಾರ ತೆಗೆದಿದೆ: ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ.
 ವಿಶೇಷವಾಗಿ ಎಡದಂಡೆ ನಾಲೆಯ ಆಧುನೀಕರಣಕ್ಕೆ ಕೋಟಿಗಟ್ಟಲೇ ಹಣ ನೀಡುವ ಮೂಲಕ ಈ ಭಾಗದ ರೈತರ ಭಾಗ್ಯದ ಬಾಗಿಲನ್ನು ಸರ್ಕಾರ ತೆಗೆದಿದೆ. ನಗರಸಭೆ ಚುನಾವಣೆಯಲ್ಲಿ ಪಕ್ಷ ಸೋತಿದ್ದನ್ನು ಒಪ್ಪಿಕೊಂಡ ಅವರು ಇದರ ಪರಿಣಾಮ ವಿಧಾನಸಭಾ ಚುನಾವಣೆಗೆ ಆಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಅಲೆ ಇದೆ. ಕಳೆದ ಒಂದು ವಾರದಲ್ಲಿ ನಗರದ ಎಲ್ಲಾ ವಾರ್ಡ್ಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ಯುವಕರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.
ಜಾತ್ಯಾತೀತ ಪಕ್ಷ: ಸುದ್ದಿಗೋಷ್ಠಿಯನ್ನುದ್ದೇಶಿಸಿ ಬಿಜೆಪಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ ಮಾತನಾಡಿ, ಬಿಜೆಪಿ ಎಲ್ಲಾ ಜಾತಿ ಜನಾಂಗದವರಿಗೆ ಟಿಕೆಟ್ ನೀಡುವ ಮೂಲಕ ಜಾತ್ಯಾತೀತ ಪಕ್ಷವಾಗಿ ಗುರುತಿಸಿಕೊಂಡಿದೆ. ತಾವು ಹಾಗೂ ಶಿವನಗೌಡರು ಟಿಕೆಟ್ ಆಕಾಂಕ್ಷಿಗಳಾಗಿದ್ದೇವು ಆದರೆ ಪಕ್ಷ ಕೆ.ಶೇಷಗಿರಿರಾವ್ ಅವರಿಗೆ ಟಿಕೆಟ್ ನೀಡಿರುವುದರಿಂದ ತಾವು ಪಕ್ಷದ ಪರವಾಗಿ ಹಾಗೂ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ನ.ಯೋ.ಪ್ರಾ.ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ಬಿಜೆಪಿಗೆ ತಾಲೂಕಿನಲ್ಲಿ ಗುರುತಿಸಿಕೊಳ್ಳದ ಸಾಕಷ್ಟು ಮತದಾರರಿರುವರು. ಆದರೆ ಅವರು ಬಹಿರಂಗವಾಗಿ ಹೊರಬರುವ ಸ್ಥಿತಿಯಲ್ಲಿಲ್ಲ. ತಮ್ಮ ಅಭ್ಯರ್ಥಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ಭವಿಷ್ಯ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಕಾರ್ಯದರ್ಶಿ ಮಧ್ವರಾಜ, ಮುಖಂಡರಾದ ಕೆ.ಅಮರೇಗೌಡ, ಶಿವಬಸನಗೌಡ, ಶಂಕರಗೌಡ ಗೋನವಾರ, ಶಂಕರಗೌಡ ಜೋಳದರಾಶಿ, ರಾಮಕೋಟೇಶ್ವರಾವ್, ದೇವೇಂದ್ರಪ್ಪ ಯಾಪಲಪರ್ವಿ, ನಡವಿ ಕೃಷ್ಣಮೂರ್ತಿ, ಹನುಮೇಶ ನಾಯಕ, ಮೈಬೂಬಸಾಬ ಬೂತಲದಿನ್ನಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖಂಡರಾದ ಬಸಪ್ಪ ಕಲ್ಲೂರ, ಶಂಕರ ಬಂಬು, ಸಿ.ಬಿ.ಪಾಟೀಲ್ ಬಿಜೆಪಿ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement