'ಯುವಕರಲ್ಲಿ ಕ್ರೀಡಾಸಕ್ತಿ ಇರಲಿ'
ಮುದಗಲ್: ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕೆಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲರ ಪುತ್ರ ಪ್ರಸನ್ನ ಪಾಟೀಲ್ ಕಿವಿಮಾತು ಹೇಳಿದರು.
ಪಟ್ಟಣ ಸಮೀಪದ ಮಟ್ಟೂರಲ್ಲಿ ಯುಗಾದಿ ಹಬ್ಬದ ಅಂಗವಾಗಿ ಎಂಸಿಸಿ ಹಾಗೂ ಡಿಸಿಸಿ ಪ್ಲೆ ಬಾಯ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಟೆನ್ನಿಸ್ಬಾಲ್ ಕ್ರಿಕೆಟ್ ಟೂರ್ನಮೆಂಟ್ನ ಬ್ಯಾಟ್ ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಟದಲ್ಲಿ ಸೋಲು ಗೆಲವನ್ನು ಸಮನಾಗಿ ತೆಗೆದುಕೊಂಡು ನಿರಂತರ ಪರಿಶ್ರಮದಿಂದ ಉತ್ತಮ ಆಟಗಾರನಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಹುಲ್ಲೂರು, ಮುಖಂಡರಾದ ಶರಣಬಸವ ಮಟ್ಟೂರು, ಬಸನಗೌಡ ಸುಲ್ತಾನಪುರ, ಶರಣಪ್ಪ ಬುದ್ದಿನ್ನಿ, ಪಂಪಣ್ಣ, ಬಸವರಾಜ ಚುಕನಹಟ್ಟಿ, ವರದಿಗಾರ ಹನುಮಂತ ನಾಯಕ, ರಮೇಶ, ಲೋಕೇಶ ನಾಯ್ಕ್, ಗ್ರಾಪಂ ಸದಸ್ಯ ಚೌರಪ್ಪ, ಮೌನೇಶ, ಶೇಖರ ಚವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.