ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಜ್ಯದಲ್ಲಿ ಕಾಂಗ್ರೆಸ್ಗೆ ಬಹುಮತ: ಜಾರಕಿಹೊಳಿ ವಿಶ್ವಾಸ

Lingaraj Badiger
Updated On : 9 Apr 2013, 11:31 am

ದೇವದುರ್ಗ: ಕಾಂಗ್ರೆಸ್ನಿಂದ ಮಾತ್ರ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ತಾಲೂಕಿನ ಅರಕೇರಾ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೈ.ಕ. ಭಾಗದ ಸಮಗ್ರ ಪ್ರಗತಿಗೆ 371ನೇ ಕಲಂ ಜಾರಿಗೆ ತಂದಿದೆ. ಈ ಮೂಲಕ ಮುಂಬರುವ ದಿನಗಳಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗ, ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ದೊರೆಯಲಿದೆ ಎಂದು ಹೇಳಿದರು.
ಗೆಲವು ನಿಚ್ಚಳ: ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಗೆಲವು ಕಾಣುವುದು ನಿಚ್ಚಳವಾಗಿದೆ. ಜನತೆ ಬಿಜೆಪಿ ಶಾಸಕರ ಕಾರ್ಯವೈಖರಿಯಿಂದ ಬೇಸತ್ತಿದ್ದಾರೆ. ಮತದಾರರಿಗೆ ಬದಲಾವಣೆ ಬೇಕಿದೆ ಎಂಬುದು ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿರುವ ಬೆಂಬಲದಿಂದಲೇ ಗೊತ್ತಾಗಿದೆ ಎಂದರು. ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಸಂಸದ ವೆಂಕಟೇಶ ನಾಯಕ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿಯೊಬ್ಬರು ಜೈಲಿಗೆ ಹೋಗಿ ಬಂದರು. ಅವರ ಸಂಪುಟದ ಸಚಿವರೂ ಜೈಲು ಕಂಡಿದ್ದಾರೆ. ಇಂಥ ಭ್ರಷ್ಟಾಚಾರಿಗಳಿರುವ ಪಕ್ಷವನ್ನು ಮತದಾರರು ತಿರಸ್ಕರಿಸಬೇಕಿದೆ ಎಂದು ಕರೆ ನೀಡಿದರು.
ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಶಾಸಕರಿಂದಾಗಿ ಅಶಾಂತಿ ಉಂಟಾಗಿದೆ. ಇದಕ್ಕೆ  ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಹೈಕಮಾಂಡ್ ಸೂಚನೆ: ಕಳೆದ ಎರಡು ಚುನಾವಣೆಯಲ್ಲಿ ತಾಲೂಕಿನ ಜನತೆ ತಮ್ಮನ್ನು ಹಾಗೂ ತಮ್ಮ ಪುತ್ರನನ್ನು ಸೋಲಿಸಿದ್ದರು. ವಯಸ್ಸಾಗಿರುವುದರಿಂದ ರಾಜಕೀಯ ದೂರದಿಂದ ಉಳಿಯಲು ನಿರ್ಧರಿಸಿದಾಗ ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಪುನಾ ಕಣಕ್ಕಳಿದಿದ್ದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮುಂಡರಗಿ ಜಿಪಂ ಸದಸ್ಯ ಶಿವಣ್ಣ ತಾತಾ, ಅರಕೇರಾ ತಾಪಂ ಸದಸ್ಯ ಸತ್ಯನಾರಾಯಣ ನಾಯಕ, ಗಬ್ಬೂರಿನ ಮುಖಂಡ  ಖಾಜಾ ಗೌಡ, ಬುಡ್ಡನಗೌಡ ಜಾಟಗಕಲ್, ಹನುಮರಡ್ಡೆಪ್ಪ ಮಿಯ್ಯಾಪೂರ, ನಾಗಪ್ಪ ಪಾಮರತಿ, ಅಮರ ಗೌಡ ಗೌರಂಪೇಟ, ಅಯ್ಯನಗೌಡ ಗಲಗ, ಅಮರೇಶ ಚವ್ಹಾಣ ಬಂಡೆಗುಡ್ಡ, ಅಮೀನರಡ್ಡಿ ಪಾಟೇಲ, ಪುರಸಭೆ ಮಾಜಿ ಸದಸ್ಯರಾದ ಮುನೀರ ಪಾಶಾ, ಸಾಸ್ವಿಗೇರಾ ಗ್ರಾ. ಪಂ. ಸದಸ್ಯರಾದ ಭೋಜಪ್ಪ ನಾಯ್ಕ,  ನಿವೃತ್ತ ಸೈನಿಕ ಸಿದ್ದಪ್ಪ ಗಣೇಕಲ್ ಮತ್ತಿತರರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ರಾಜಾ ರಾಯಪ್ಪ ನಾಯಕ, ವಿಧಾನಪರಿಷತ್ ಮಾಜಿ ಬಸವರಾಜ ಪಾಟೀಲ್ ಇಟಗಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಯಕ್ಬಾಲಸಾಬ್ ಹೌದುಡಿ, ಮಾತನಾಡಿದರು. ಯುವ ನಾಯಕ ಬಿ.ವಿ. ನಾಯಕ, ಮಲ್ಲಿಕಾರ್ಜುನ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಆರ್. ಅಕ್ಕಮಹಾದೇವಿ ಪಾಟೀಲ್ ಮತ್ತಿತರರಿದ್ದರು.

ಕಾಂಗ್ರೆಸ್ ಪರ ಅಲೆ
ದೇವದುರ್ಗ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಪರ ಅಲೆಯಿದ್ದು, ಚುನಾವಣೆಯಲ್ಲಿ ಪಕ್ಷಕ್ಕೆ ಅಗತ್ಯ ಸಂಖ್ಯೆಯ ಸ್ಥಾನಗಳಲ್ಲಿ ಗೆಲುವು ದೊರೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳೆ ವಿಶ್ವಾಸ ವ್ಯಕ್ತಪಡಿಸಿದರು.
 ತಾಲೂಕಿನ ಅರಕೇರಾ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಹಣದಿಂದ ಮತದಾರರ ಖರೀದಿ ಅಸಾಧ್ಯ. ಪ್ರಜ್ಞಾವಂತ, ಬುದ್ಧಿವಂತ ಮತದಾರರು ಕೇವಲ ಹಣವನ್ನು ನೋಡದೆ ವ್ಯಕ್ತಿಯನ್ನು ಗಮಿಸುತ್ತಾರೆಂದು ಹೇಳಿದರು.  ನಿರ್ಭೀತಿಯಿಂದ ಮತದಾನ ಮಾಡಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದೇವದುರ್ಗ ತಾಲೂಕಿನಲ್ಲಿಯೂ ಕಟ್ಟುನಿಟ್ಟಿನ ಕ್ರಮ ನಿಶ್ಚಿತ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement