ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಗನವಾಡಿ ವೇಳೆ ಬದಲಾವಣೆಗೆ ಒತ್ತಾಯ

Rashmi Kasaragodu
Updated On : 10 Apr 2013, 11:23 am


ಸಿಂಧನೂರು: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬೇಸಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಂಜೆಯವರೆಗೂ ಕೇಂದ್ರ ತೆರೆದಿಡಬೇಕಾಗಿರುತ್ತದೆ. ಈ ಬಗ್ಗೆ ಗಮನಿಸಿ ಸಮಯ ಬದಲಾವಣೆ ಮಾಡುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯ ಫೆಡರೇಷನ್‌ನಿಂದ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.
ಸರ್ಕಾರವು ಈ ಭಾಗದ ಸರ್ಕಾರಿ ಕಚೇರಿಗಳಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯ ನಿರ್ವಹಿಸುವಂತೆ ಆದೇಶಿಸಿದೆ. ಆದರೆ ಅದು ಅಂಗನವಾಡಿ ಕೇಂದ್ರಕ್ಕೆ ಅನ್ವಯಿಸಿಲ್ಲ. ಅಂಗನವಾಡಿ ಕೇಂದ್ರಗಳನ್ನು 4 ಗಂಟೆಯವರೆಗೂ ತೆರೆಯುವಂತೆ ಸಿಡಿಪಿಒ ಸೂಚಿಸುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಅದೇ ರೀತಿ ಗೌರವ ಧನವನ್ನು ಶೀಘ್ರವಾಗಿ ನೀಡಬೇಕು. ಸಿಂಧನೂರಿನ ಬಿ ಸರ್ಕಲ್ ಮೇಲ್ವಿಚಾರಕಿ ರುಕ್ಮಣಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಪ್ರತಿ ತಿಂಗಳೂ ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ನಿರಾಕರಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಕಾರ್ಯಕರ್ತೆಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್. ಕಂಬಳಿ, ರಾಜ್ಯ ಸಮಿತಿ ಸದಸ್ಯ ಎಂ. ತಿಪ್ಪಯ್ಯ ಶೆಟ್ಟಿ, ಸುಲೋಚನಾ, ಸರಸ್ವತಿ, ಶಂಶುನ್ನೀಸಾ ಬೇಗಂ, ಅಮರಮ್ಮ, ಗೌರಮ್ಮ, ಇಂದಿರಮ್ಮ ಜವಳಗೇರಾ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement