ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಯೋಗದ ನಿಯಮಗಳ ಪಾಲನೆ ಅಗತ್ಯ: ಯೋಗೇಶ್

Rashmi Kasaragodu
Updated On : 10 Apr 2013, 11:22 am

ಕನ್ನಡಪ್ರಭ ವಾರ್ತೆ   ಲಿಂಗಸ್ಗೂರು   ಏ.9
ವಿಧಾನಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಲ್ಲಿದೆ ಹಾಗೂ ಚುನಾವಣೆ ಅಧಿಸೂಚನೆ ಏ.10 ರಿಂದ ಜಾರಿಯಾಗಲಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಲಿಂಗಸ್ಗೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಟಿ. ಯೋಗೇಶ್ ಮತ್ತು ಶ್ರೀನಿವಾಸ ಅವರು ತಿಳಿಸಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಚುನಾವಣೆ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ವಿವರಣೆ ಅವರು ನೀಡಿದರು. ತಾಲೂಕಿನ ಲಿಂಗಸ್ಗೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 5ರಂದು ನಡೆಯಲಿರುವ ಚುನಾವಣೆ ಸುಲಲಿತ ಮತ್ತು ಶಾಂತಿಯುತವಾಗಿ ಯಶಸ್ವಿಗೊಳ್ಳಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಮುಖಂಡರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಬ್ಯಾಂಕ್ ಖಾತೆ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವೆಚ್ಚದ ಮಿತಿ ರು. 16 ಲಕ್ಷ ಆಗಿದ್ದು, ಅಭ್ಯರ್ಥಿಯು ನೂತನ ಪ್ರತ್ಯೇಕ ಬ್ಯಾಂಕ್ ಖಾತೆ ತೆಗೆದು ಅದರ ವಿವರ ನಾಮಪತ್ರದೊಂದಿಗೆ ಸಲ್ಲಿಸಬೇಕು. ಚುನಾವಣಾ ಏಜೆಂಟ್‌ನ ಜಂಟಿ ಖಾತೆಯಲ್ಲಿ ಇರಬಹುದಾಗಿದೆ. ರು. 20 ಸಾವಿರಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಬೇಕಾಗಿದ್ದಲ್ಲಿ ಕಡ್ಡಾಯವಾಗಿ ಅದೇ ಖಾತೆಯಿಂದ ಚೆಕ್ ಮೂಲಕ ನೀಡಬೇಕು. ಸಭೆ, ಸಮಾರಂಭ, ರೋಡ್ ಶೋ, ರ್ಯಾಲಿಗಳಿಗೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು.
ವೆಚ್ಚದ ದಾಖಲೆಗಳು: ಅಭ್ಯರ್ಥಿಯು ಚನಾವಣಾ ವೆಚ್ಚದ ವಿವರಗಳನ್ನು 3 ರಿಜಿಸ್ಟರ್‌ಗಳಲ್ಲಿ ದಾಖಲಿಸಬೇಕು. ಪ್ರತಿದಿನದ ಖರ್ಚಿನ ವಿವರ, ನಗದು ಮುಖಾಂತರ ಖರ್ಚಿನ ವಿವರ, ಬ್ಯಾಂಕ್ ಮುಖಾಂತರ ಖರ್ಚಿನ ವಿವರ ಸೇರಿದಂತೆ ಪ್ರಚಾರ ಅವಧಿಯಲ್ಲಿ ಕನಿಷ್ಠ 3 ಸಲ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಪೋಲಿಂಗ್ ಏಜೆಂಟ್ ಅದೇ ಮತಗಟ್ಟೆಯ ಮತದಾರನಾಗಿರಬೇಕು.
ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ ಕಟೌಟ್, ಪೋಸ್ಟರ್, ಗೋಡೆ ಬರಹ, ಬ್ಯಾನರ್, ಬಂಟಿಂಗ್ ಅಂಟಿಸುವುದು ನಿಷೇಧಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ನಿಗದಿತ ನಮೂನೆಯಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ನಂತರ ಮಾಲೀಕರ ಒಪ್ಪಿಗೆ ಪಡೆದು ಅಂಟಿಸಬಹುದಾಗಿದೆ. ಪರವಾನಿಗೆ ಪಡೆದ ಪಕ್ಷದ ಕಚೇರಿ ಮತ್ತು ವಾಹನದ ಮೇಲೆ ಒಂದು ಧ್ವಜ ಅಥವಾ ಕಟೌಟ್ ಬಳಸಬಹುದಾಗಿದೆ.
ಸೂಚಕರು: ಮಾನ್ಯತೆ ಪಡೆದ ರಾಷ್ಟ್ರ ಮತ್ತು ರಾಜ್ಯ ಪಕ್ಷಗಳಿಗೆ ಒಬ್ಬ ಸೂಚಕರು. ನೋಂದಾಯಿತ ಆದರೆ, ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿ ಹಾಗೂ ಪಕ್ಷೇತರರು 10 ಜನ ಸೂಚಕರು. ಸೂಚಕರು ಕಡ್ಡಾಯವಾಗಿ ಅದೇ ವಿಧಾನಸಭಾ ಕ್ಷೇತ್ರದ ಮತದಾರನಾಗಿರಬೇಕು. ಮತ್ತು ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯೊಂದಿಗೆ ತನ್ನ ಮತದಾರರ ಗುರುತಿನ ಚೀಟಿ ಮತ್ತು ಮತದಾರರ ಪಟ್ಟಿಯೊಂದಿಗೆ ಹಾಜರಿರಬೇಕು. ಒಬ್ಬ ಅಭ್ಯರ್ಥಿಯು 4 ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ. ಫಾರ್ಮ್-ಎ, ಬಿ ಗಳನ್ನು ಏ.17 ರಂದು ಮಧ್ಯಾಹ್ನ 3 ಗಂಟೆ ಒಳಗೆ ಚುನಾವಣಾಧಿಕಾರಿಗೆ ಸಲ್ಲಿಸಬಹುದಾಗಿದೆ.
ಘೋಷಣಾ ಪತ್ರ: ಅಫಿಡೆವಿಟ್ ನಮೂನೆ-26ನ್ನು ಒಂದು ರುಪಾಯಿ ಬಾಂಡ್ ಪೇಪರ್ ಮೇಲೆ ತಯಾರಿಸಿ ಅಭ್ಯರ್ಥಿಯ ಸಹಿಯೊಂದಿಗೆ ನೋಟರಿ ಮುಂದೆ ಪ್ರಮಾಣಿಕೃತಗೊಳಿಸಬೇಕು. ಎಲ್ಲ ಕಾಲಂಗಳನ್ನು ತುಂಬಿರಬೇಕು ಹಾಗೂ ತಮಗೆ ಅನ್ವಯವಾಗದ ಕಾಲಂ ಮುಂತೆ ಇಲ್ಲ ಎಂದು ಬರೆಯಬೇಕು. ನಮೂನೆ-26 ನ್ನು 2 ಮೂಲ ಪ್ರತಿಗಳು ಮತ್ತು ಒಂದು ಜೆರಾಕ್ಸ್ ಪ್ರತಿಯನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕು.
ಠೇವಣಿ: ಸಾಮಾನ್ಯ ಕ್ಷೇತ್ರಗಳಿಗೆ ರು. 10 ಸಾವಿರ ಮೀಸಲು ಕ್ಷೇತ್ರಗಳಿಗೆ ರು. 5 ಸಾವಿರ ಠೇವಣಿ ಮೊತ್ತವನ್ನು ಚುನಾವಣಾಧಿಕಾರಿಗೆ ನಗದು ರೂಪದಲ್ಲಿ ನಾಮಪತ್ರದೊಂದಿಗೆ ಸಲ್ಲಿಸಬೇಕು. ಅಫಿಡೇವಿಟ್ ನಮೂನೆ-26ರ ಕಾಲಂ-3(ಛ)(್ಝ್ಝ್ಝ)ರಲ್ಲಿ ಸರ್ಕಾರಕ್ಕೆ ವಸತಿ, ನೀರಿನ ಸುಂಕ, ದೂರವಾಣಿ, ಪ್ರಯಾಣ ಬಾಕಿ ಇತ್ಯಾದಿಗಳ ವಿವರ ಸಲ್ಲಿಸಬೇಕು. ಅಭ್ಯರ್ಥಿ ಸರ್ಕಾರಕ್ಕೆ ಸಲ್ಲಿಸಬಹುದಾದ ಬಾಕಿಗಳಿದ್ದಲ್ಲಿ ಆಟಿಟಿಜ್ಢ್ಡ್ಠಜ-್ಗಐಗ ರ ಮೂಲಕ 2 ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗುವುದು.
ಮಾದರಿ ನೀತಿ ಸಂಹಿತೆ: ಮಾದರಿ ನೀತಿ ಸಂಹಿತೆಯ ಕುರಿತು ಜಿಲ್ಲೆಯಲ್ಲಿ ಈಗಾಗಲೇ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಪ್ರತಿ ಕ್ಷೇತ್ರಕ್ಕೆ ಮಾದರಿ ನೀತಿ ಸಂಹಿತೆಯ ಫ್ಲಾಯಿಂಗ್ ಸ್ಕ್ವಾಡ್‌ಗಳನ್ನು ನೇಮಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಕುರಿತ ದೂರುಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ದೂ.08539-225002ಗೆ ಸಲ್ಲಿಸಬಹುದಾಗಿದೆ. ಚುನಾವಣಾ ಆಯೋಗವು ನೀಡಿರುವ ಮಾದರಿ ನೀತಿ ಸಂಹಿತೆಯ ನಿರ್ದೇಶನಗಳನ್ನು ಲಗತ್ತಿಸಿದೆ.
ದಾಖಲೆಗಳ ಸಲ್ಲಿಕೆ: ಚುನಾವಣಾಧಿಕಾರಿ ನಾಮಪತ್ರವನ್ನು ಸ್ವೀಕರಿಸಿದ ನಂತರ ನಾಮ ಪತ್ರದೊಂದಿಗೆ ಲಗತ್ತಿಸಿದ ಮತ್ತು ಲಗತ್ತಿಸಬೇಕಾದ ದಾಖಲೆಗಳ ಕುರಿತು ಖ.ಕ. ಏಛಟಿಜಛ್ಟ್ಟ್ಞಿ ಕಿಛ್ಜಜ-54ರಲ್ಲಿ ನಿಗದಿ ಪಡಿಸಿದ ನಮೂನೆಯಲ್ಲಿ ಸ್ವೀಕೃತಿ ಪತ್ರವನ್ನು ಅಭ್ಯರ್ಥಿಗೆ ಸಹಿ ಮಾಡಿ ನೀಡಿ, ಸ್ವೀಕೃತಿ ಪತ್ರದ ಒಂದು ಪ್ರತಿಯನ್ನು ಅಭ್ಯರ್ಥಿಯ ಸಹಿಯೊಂದಿಗೆ ತನ್ನಲ್ಲಿ ಇಟ್ಟುಕೊಳ್ಳಬೇಕೆಂದು ವಿವರಣೆ ನೀಡಿದರು.
ಒಟ್ಟಾರೆ ವಿಧಾನಸಭೆ ಚುನಾವಣೆ ಸುಲಲಿತ ಮತ್ತು ಶಾಂತಿಯುತವಾಗಿ ಯಶಸ್ವಿಗೊಳ್ಳಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಮುಖಂಡರು ಸೇರಿದಂತೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ ಎನ್.ಬಿ. ಪಾಟೀಲ್, ಹಂಗಾಮಿ ಶಾಸಕ ಮಾನಪ್ಪ ವಜ್ಜಲ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಶರಣಪ್ಪ ಮೇಟಿ, ಗಿರಿಮಲ್ಲನಗೌಡ, ಪಾಮಯ್ಯ ಮುರಾರಿ, ಜಿ.ಜಿ. ನಾಯಕ, ಶರಣಪ್ಪ ಮೇಟಿ ಚಿಕ್ಕಹೆಸರೂರ, ಅಮರೇಶ ಬಲ್ಲಟಗಿ, ಅಂದಾನಪ್ಪ ಗುಂಡಳ್ಳಿ, ಶೇಖರಪ್ಪ ತಳವಾರ, ಅಮೀನ ಪಟೆಲ್, ಮೌನೇಶ ನಾಯಕ, ಮಲ್ಲಪ್ಪ ಚಿತಾಪೂರ, ಜಲಾಲುದ್ದಿನ್, ಮಲ್ಲಯ್ಯ ಸಾಲಿಮಠ, ಶಿವಾನಂದ ಐದನಾಳ, ಬಸನಗೌಡ ಮುಧೋಳ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement