ಗುಂಡಸಾಗರ ಬಳಿ ಬೈಕ್ಗೆ ಬಸ್ ಡಿಕ್ಕಿ: ಸವಾರ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಗುಂಡಸಾಗರ ಗ್ರಾಮದ ಹತ್ತಿರ ಬೈಕ್ಗೆ ಬಸ್ ಡಿಕ್ಕಿಯಾಗಿ ಅದರ ಸವಾರ ಸಾವಿಗೀಡಾಗಿದ್ದಾನೆ. ಮೃತನನ್ನು ಖಾಸಿಂಸಾಬ್ ಎಂದು ಗುರ್ತಿಸಲಾಗಿದೆ. ಈತ ಬೈಕ್ ಮೇಲೆ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡ ಆತ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಲಿಂಗಸ್ಗೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಸಿಂಧನೂರು: ತಾಲೂಕಿನ ಬಳಗಾನೂರ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯ ನಂಬರ್ 54 ಮುಖ್ಯ ಕಾಲುವೆಯಲ್ಲಿ ಅಪರಿಚಿತ ಗಂಡು ವ್ಯಕ್ತಿಯ ಶವ ತೇಲಿ ಬಂದಿದೆ. ಅಂದಾಜು 35 ರಿಂದ 40 ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ. ಬಿಳಿ ಅಂಗಿ, ಬಿಳಿಯ ಬಣ್ಣದ ಬನಿಯನ್ ಧರಿಸಿದ್ದು ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2.50 ಲಕ್ಷ ಲೂಟಿ
ರಾಯಚೂರು: ನಗರದ ಗಾಂಧಿ ವೃತ್ತದ ಬಳಿ ಬ್ಯಾಂಕ್ನಿಂದ ಪಡೆದು ಕೊಂಡೊಯ್ಯುತ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದ ಇಬ್ಬರು ದುಷ್ಕರ್ಮಿಗಳು ಅವರ ಬಳಿಯಿದ್ದ 2.50 ಲಕ್ಷವನ್ನು ಮಂಗಳವಾರ ಬೆಳಗ್ಗೆ ದೋಚಿದ್ದಾರೆ. ಗೋವಿಂದರಾವ್ ಪೆಟ್ರೋಲ್ ಬಂಕ್ ಬಳಿ ಸೈಯದ್ ರವೂಫ್ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ದುಷ್ಕರ್ಮಿಗಳು ಅವರ ಗಮನ ಬೇರೆಡೆ ಸೆಳೆದು, 2.50 ಲಕ್ಷ ದೋಚಿ ಪರಾರಿಯಾಗಿದ್ದಾರೆ. ಸದರ್ ಬಜಾರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೀವಾವಧಿ ಶಿಕ್ಷೆ
ರಾಯಚೂರು: ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ನಗರದ ಹೊರವಲಯದ ಬೋಳಮಾನದೊಡ್ಡಿ ರಸ್ತೆಯಲ್ಲಿ ಮುನಿಯಪ್ಪ ಎಂಬಾತನನ್ನು ಅನೈತಿಕ ಸಂಬಂಧ ಹಿನ್ನೆಲೆಯ ದ್ವೇಷದಿಂದ ಬೈಕ್ ಮೇಲೆ ತೆರಳುತ್ತಿದ್ದಾಗ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆರೋಪಿಗಳಾದ ಗಡ್ಡದ ಈರಣ್ಣ, ಚಾಮರಾಜ, ಈಶಪ್ಪ, ಶಿವಶಂಕರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಿವಶಂಕರ್ ತಲೆಮರೆಸಿಕೊಂಡ ಹಿನ್ನೆಲೆ ಇನ್ನುಳಿದ ಮೂವರು ಆರೋಪಿಗಳಿಗೆ ಜೀವಾವಧಿ ವಿಧಿಸಿ ತೀರ್ಪಿತ್ತಿದ್ದಾರೆ. ಸರ್ಕಾರದ ಪರವಾಗಿ ರಂಗಯ್ಯ ವಾದ ಮಂಡಿಸಿದ್ದರು.