ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಾಲಕರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ: ಗೋನವಾರ

Rashmi Kasaragodu
Updated On : 10 Apr 2013, 11:23 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ. 9
ಪ್ರಜಾಪ್ರಭುತ್ವದಲ್ಲಿ ಪ್ರತಿ ಮಗುವೂ ಶಿಕ್ಷಣ ಪಡೆಯಬೇಕು. ಮುಂದಿನ ದಿನಗಳಲ್ಲಿ ಅವರೇ ನಮ್ಮ ಆಸಿ.್ತ ಇದರಿಂದಾಗಿ ಪಾಲಕರು ಮಕ್ಕಳಿಗೆ ಉನ್ನತ ಶಿಕ್ಷಣದವರೆಗೂ ಶಿಕ್ಷಣ ನೀಡಿಸುವಲ್ಲಿ ಮುಂದಾಗಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಪಾಲಕರು ಕಾರಣವಾಗಬಾರದೆಂದು ಕನಕನಗರ ಸಿಆರ್‌ಪಿ ವೀರೇಶ ಗೋನವಾರ ಹೇಳಿದರು.
ಅವರು ಕನಕನಗರ ಕ್ಲಸ್ಟರ್ ವ್ಯಾಪ್ತಿಯ ನಗರದ ಸುಕಾಲಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಪಾಲಕರ ಪಾತ್ರ ಮುಖ್ಯ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಒಂದಿದ್ದರೆ ಸಾಲದು. ಅದರ ಜೊತೆ ಪಾಲಕರ ಪಾತ್ರವೂ ಮುಖ್ಯ. ಇದರಿಂದ ಉನ್ನತ ಮಟ್ಟದಲ್ಲಿ ಮಕ್ಕಳ ವಿದ್ಯಾಭ್ಯಾಸ ಸಾಧ್ಯ. ಮಕ್ಕಳಲ್ಲಿ ಮೊದಲು ಸಮಯಪ್ರಜ್ಞೆ ಇರಬೇಕು. ಶಾಲೆಯನ್ನು ತಪ್ಪಿಸದೇ ಪ್ರತಿನಿತ್ಯ ಶಾಲೆಗೆ ಬರಬೇಕು. ಓದುವುದರ ಜೊತೆಗೆ ಆಟವಾಡಬೇಕು. ಇದರಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ. ಮಕ್ಕಳಿಗಾಗಿಯೇ ಸರ್ಕಾರದಿಂದ ಸಮವಸ್ತ್ರ, ಪಠ್ಯ-ಪುಸ್ತಕಗಳು, ಬಿಸಿಯೂಟ, ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ.
ಇದರಿಂದಾಗಿ ಸರ್ಕಾರದ ಸೌಲಭ್ಯಗಳನ್ನು  ಪಡೆಯುವುದರ ಜೊತೆಗೆ ಮಕ್ಕಳು ಉನ್ನತ ಸ್ಥಾನಕ್ಕೇರಿ ಹೆತ್ತ ತಂದೆ-ತಾಯಿಗೆ ಹಾಗೂ ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಸದುಪಯೋಗ ಮಾಡಿಕೊಳ್ಳಿ: ನಂತರ ಶಾಲೆಯ ಎಸ್‌ಡಿಎಂಸಿ ಅಧಕ್ಷ ಬಿ.ಹನುಮೇಶ ಮಾತನಾಡಿ ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವಂತೆ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುವಂತೆ ತಿಳುವಳಿಕೆ ನೀಡಿದರು. ಸರ್ಕಾರದ ನೀಡಿದ ಸೌಲಭ್ಯಗಳನ್ನು ಉತ್ತಮ ರೀತಿಯಿಂದ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿ ಜೀವನವನ್ನು ಬಂಗಾರಮಯವನ್ನಾಗಿ ಮಾಡಿಕೊಂಡು ಸಾಗಿರಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಲ್ಲಪ್ಪ ಕಾರಟಗಿ, ನೋಡಲ್ ಅಧಿಕಾರಿ ಆನಂದ ಕುಮಾರ, ಮುಖ್ಯೋಪಾಧ್ಯಾಯ ಅನಂತರಾವ್ ಮಾತನಾಡಿದರು. ವೇದಿಕೆ ಮೇಲೆ ಶಾಲಾ ಎಸ್‌ಡಿಎಂಸಿ ಸದಸ್ಯ ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಅಂಭೋಜಿ ಪವಾರ್ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೇಣುಕಾ ಎಸ್. ಗೌಡರ್ ವಂದಿಸಿದರು.
ಇನ್‌ಸ್ಪೈರ್ ಅವಾರ್ಡ್: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮಹತ್ವಾಕಾಂಕ್ಷೆ ಇನ್ಸ್‌ಪೈರ್ ಅವಾರ್ಡ್‌ಗೆ ಬಾಲವಿಜ್ಞಾನಿಯಾಗಿ ಆಯ್ಕೆಯಾದ ವಿದ್ಯಾರ್ಥಿ ವೀರೇಶಗೆ ರು. 5000 ಮೌಲ್ಯದ ಚೆಕ್ಕನ್ನು ಹಾಗೂ ಬಿ.ಸಿ.ಎಂ ಇಲಾಖೆಯಿಂದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಇದಕ್ಕೂ ಮುಂಚೆ ಮಾರ್ಗದರ್ಶಕರು ಬೆಳಗ್ಗೆಯಿಂದ 1 ರಿಂದ 8 ನೇ ತರಗತಿಗಳ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪಾಲಕರ ಸಮ್ಮುಖದಲ್ಲಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement