ಬಳಗಾನೂರು: ಕೆಜೆಪಿ ಅಭ್ಯರ್ಥಿ ಪರ ಮತಯಾಚನೆ
ಸಿಂಧನೂರು: ತಾಲೂಕಿನ ಬಳಗಾನೂರು ಮಸ್ಕಿ ವಿಧಾನಸಭಾ ಕ್ಷೇತ್ರದ್ಯಾಂತ ಕೆಜೆಪಿ ಮೇಲೆ ಜನತೆ ವಿಶ್ವಾಸವಿಟ್ಟಿದ್ದಾರೆ. ಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ನಿಯೋಜಿತ ಅಭ್ಯರ್ಥಿ ಮಹಾದೇವಪ್ಪಗೌಡ ಹೇಳಿದರು.
ಅವರು ಬಳಗಾನೂರ ಸಮೀಪದ ಹುಲ್ಲೂರು ಮತ್ತು ಲಕ್ಷ್ಮೀ ಕ್ಯಾಂಪ್ನಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರಾದ್ಯಂತ ಶಾಸಕ ಪ್ರತಾಪ ಗೌಡ ಅವರ ಭ್ರಷ್ಟ ಆಡಳಿತಕ್ಕೆ ಜನ ಬೇಸತ್ತಿದ್ದಾರೆ. ಕೆಜೆಪಿ ಕಡೆ ಒಲವು ತೋರುತ್ತಿದ್ದಾರೆ ಎಂದರು. ಕೃಷ್ಣಾ ಕಾಡ ಮಾಜಿ ಅಧ್ಯಕ್ಷ ತಿಮ್ಮನಗೌಡ ಗುಡುದೂರು ಮಾತನಾಡಿ, ಯಡಿಯೂರಪ್ಪರ ಅಧಿಕಾರಾವಧಿ ಜನಪರ ಯೋಜನೆಗಳ ಬಗ್ಗೆ ತಿಳಿಸಿದರು. ರವಿಕುಮಾರ ಪಾಟೀಲ್, ಬುಳ್ಳನಗೌಡ ಶಂಕರಬಂಡಿ, ಹನುಮಂತರಾಯ ಗೌಡ, ರಾಜಶೇಖರ್, ಟಿ. ಮಂಜುನಾಥ, ವೀರನ ಗೌಡ ಗದ್ದಿ, ಗ್ರಾ.ಪಂ. ಸದಸ್ಯ ಮರಿಯಪ್ಪ, ಬಲವಂತರಾಯ ಗೌಡ, ಪಂಪಣ್ಣ ಸಾಹುಕಾರ, ಶರಣಪ್ಪ ಮರಡ್ಡಿ ಇದ್ದರು.