ಸುರಪುರ; ಅಕ್ರಮ ಮದ್ಯ ವಶ
ಸುರಪುರ: ಇಲ್ಲಿಯ ಹಳೆ ಬಸ್ ನಿಲ್ದಾಣ ಹತ್ತಿರದ ಚಹಾ ಹೋಟೆಲ್ನಲ್ಲಿ ಮಂಗಳವಾರ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 3120 ರುಪಾಯಿ ಮೊತ್ತದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗೋವಿಂದಸ್ವಾಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಡಿಸಿ ಎಸ್.ಕೆ. ಕುಮಾರ ಆದೇಶದ ಮೇರೆಗೆ ಇಲ್ಲಿಯ ಅಬಕಾರಿ ನಿರೀಕ್ಷಕರಾದ ಭಾರತಿ ನೇತೃತ್ವದಲ್ಲಿ ದಾಳಿ ನಡೆಯಿತು. ಅಬಕಾರಿ ಉಪ ನಿರೀಕ್ಷಕ ನೂರುಲ್ಲಾಖಾನ್, ರುಕ್ಕೆಪ್ಪ ನಾಟೇಕರ್, ಸಿಬ್ಬಂದಿ ಇದ್ದರು.
ಕಲಾರತ್ನ ಪ್ರಶಸ್ತಿ ಪ್ರದಾನ
ಸುರಪುರ: ತಾಲೂಕಿನ ಹಾವಿನಾಳ ಗ್ರಾಮದ ಸಕಿಪ್ರಾ ಶಾಲೆಯ ಮುಖ್ಯಗುರು ಭೀಮಣ್ಣ ಹುದ್ದಾರ್ಗೆ ಬೆಂಗಳೂರಿನ ಜಾನಪದ ಸಾಂಸ್ಕೃತಿಕ ಸಂಘವು 2013-14ನೇ ಸಾಲಿನ ಕರ್ನಾಟಕ ಜಾನಪದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಹುದ್ದಾರ್ಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.