ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕಡ್ಡಾಯ
ರಾಯಚೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏ. 15ರಿಂದ ಆರಂಭಗೊಳ್ಳಲಿದ್ದು, ಉಪ ಹಾಗೂ ಮೌಲ್ಯಮಾಪಕರಿಗೆ ಈಗಾಗಲೇ ಮಂಡಳಿಯಿಂದ ನೇಮಕಾತಿ ಆದೇಶ ಕಳಿಸಿದ್ದು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಗೈರು ಹಾಜರಾಗದೆ ಕಡ್ಡಾಯವಾಗಿ ಮೌಲ್ಯಮಾಪನ ಮಾಡಬೇಕು. ತಪ್ಪಿದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಡಿಡಿಪಿಐ ಪರಮೇಶ್ ಎಚ್ಚರಿಸಿದ್ದಾರೆ.