ತಾಯಿಗೆ ಕಿರುಕುಳ: ತಂದೆಯ ಕೊಲೆ
ಮುದಗಲ್: ತಾಯಿಗೆ ದೈಹಿಕ- ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ತಂದೆಯನ್ನು ಮಗನೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಪಟ್ಟಣದ ಕಿಲ್ಲಾದಲ್ಲಿ ಜರುಗಿದೆ.
ಕೊಲೆಯಾದ ವ್ಯಕ್ತಿಯನ್ನು ಸಾಲರಪಾಷಾ (45) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಮಗ ಶಹಬಾಜ(20) ಎಂದು ಹೇಳಲಾಗುತ್ತದೆ. ತಂದೆ ಸಾಲಾರಪಾಷಾ ತನ್ನ ತಾಯಿಗೆ ವಿಪರೀತ ಕುಡಿದು ಪ್ರತಿ ದಿನಾಲು ದೈಹಿಕ, ಮಾನಸಿಕವಾಗಿ ಕಿರುಕುಳ ನಿಡುತ್ತಿದ್ದ. ಮನೆಯಲ್ಲಿದ್ದ ಸಾಮಾನುಗಳನ್ನು ಮಾರಾಟ ಮಾಡುವುದು, ಕುಡಿದು ಬಂದು ಥಳಿಸುವುದು ಮಾಡುತ್ತಿದ್ದು, ದಿನಾಲು ನೋಡಿ ಸಾಕಾಗಿ ಈ ರೀತಿ ಮಾಡಿರುವುದಾಗಿ ಮಗ ಹೇಳಿದ್ದಾನೆ. ಬಂಧನ- ತಂದೆಯನ್ನು ಕೊಲೆ ಮಾಡಿದ್ದ ಸಹಬಾಜನ್ನು ಸ್ಥಳೀಯ ಪಿಎಸ್‌ಐ ಬಸವರಾಜ ಬಿಸನಕೋಪ್ಪ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.