ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಮಹಾ' ಮಂತ್ರಿ ಪ್ರತಿಕೃತಿ ದಹನ

Vishwanath S
Updated On : 10 Apr 2013, 10:57 am

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಏ.10
ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲರ ಇತ್ತೀಚೆಗೆ ಪ್ರಚೋದನಕಾರಿ ಭಾಷಣ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪಾಟೀಲರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕರ್ನಾಟಕ ಗಡಿ ಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಪುಂಡರ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ್ ಕರ್ನಾಟಕ ವಿಧಾನಸಭೆಗೆ 5 ಜನ ಎಂಇಎಸ್ ಶಾಸಕರನ್ನು ಆಯ್ಕೆ ಮಾಡಿದರೆ ಕರ್ನಾಟಕ ವಿಧಾನಸಭೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವೆಂದು ಪ್ರಚೋದನಕಾರಿ ಭಾಷಣ ಮಾಡಿರುವುದು ಖಂಡನೀಯ ಕ್ರಮವಾಗಿದೆ.
ಉಂಡ ಮನೆಗೆ ದ್ರೋಹ: ಕನ್ನಡದ ಅನ್ನ ತಿಂದು, ಕರ್ನಾಟಕದಲ್ಲೇ ವಾಸಿಸುವ ನಾಡದ್ರೋಹಿಗಳು ಎಂಇಎಸ್‌ಗೆ ಬೆಂಬಲಿಸುವುದು ಉಂಡ ಮನೆಗೆ ದ್ರೋಹ ಬಗೆದಂತಾಗಿದ್ದು, ಕೂಡಲೇ ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಿ ಸಚಿವ ಆರ್.ಆರ್. ಪಾಟೀಲರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕರವೇ ತಾಲೂಕು ಅಧ್ಯಕ್ಷ ಜಿಲಾನಿ ಪಾಶಾ, ಕಾರ್ಯಕರ್ತರಾದ ಶಿವರಾಜ ನಾಯಕ, ಅಜೀಜ್ ಪಾಶಾ, ಬಿ.ಎಸ್. ನಾಯಕ, ರವಿಕುಮಾರ, ಅಲ್ಲಾವುದ್ದಿನ್, ಚಂದ್ರು ನಾಯಕ, ಅಮರೇಶ ನಾಯಕ, ರಾಘವೇಂದ್ರ, ಯಲ್ಲಪ್ಪ, ಜಗದೀಶ, ಶಂಕರ, ಸದ್ದಾಂ ಹುಸೇನ, ಚೇತನ, ನಿತಿನ್, ಗುರುರಾಜ, ವೀರೇಶ ನಾಯಕ, ವಿಜಯ ಬಂಡಿ, ಮೌನೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement