ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಾಂಪತ್ಯ ಜೀವನಕ್ಕೆ10 ನವಜೋಡಿ

Lingaraj Badiger
Updated On : 13 Apr 2013, 10:59 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.12
ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಮಾಳಿಂಗರಾಯ ದೇವಸ್ಥಾನದ ಆವರಣದಲ್ಲಿ ಕನಕದಾಸ ಯುವಕ ಸಂಘ ಹಾಗೂ ಮಾಳಿಂಗರಾಯ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 10 ಜೋಡಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸುಕಾಲಪೇಟೆಯ ನಂಜುಂಡೇಶ್ವರ ಮಠದ ನಂಜುಂಡಯ್ಯ ಗುರುವಿನ, ತುರುವಿಹಾಳದ ಮಾದಯ್ಯ ಗುರುವಿನ, ಸುಕಾಲಪೇಟೆಯ ಹೊಸಗೆರೆಪ್ಪ ಪೂಜಾರಿ ಜವಳಗೇರಿಯ ಹನುಮಂತಪ್ಪ ಪೂಜಾರಿ ಬೀರಪ್ಪ ಪೂಜಾರಿ ಸಾನ್ನಿಧ್ಯದಲ್ಲಿ ಮದುವೆ ಕಾರ್ಯಕ್ರಮ ಜರುಗಿತು.
ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಕರಿಯಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ್, ಜಿಪಂ ಮಾಜಿ ಸದಸ್ಯೆಯರಾದ ಟಿ.ಲಕ್ಷ್ಮೀದೇವಿ, ಗಂಗಮ್ಮ ಕರಿಯಪ್ಪ, ತಾಪಂ ಸದಸ್ಯ ಚಂದ್ರಭೂಪಾಲ ನಾಡಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಭೀಮಣ್ಣ ಸಂಗಟಿ, ಕನಕ ಗುರುಪೀಠದ ತಾಲೂಕಾಧ್ಯಕ್ಷ ಟಿ.ಹನುಮಂತಪ್ಪ, ನಗರಸಭೆ ಸದಸ್ಯ ಗ್ಯಾನಪ್ಪ, ಮಾಜಿ ಸದಸ್ಯ ಯಂಕಪ್ಪ ಭಂಗಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ವೀರೇಶಪ್ಪ ಬೂದಿವಾಳ, ಕುರಿ ಲಚುಮಯ್ಯ ಸಾಹುಕಾರ, ಎಂ.ಎಸ್. ದೊಡ್ಡ ವೆಂಕಯ್ಯಶೆಟ್ಟಿ, ಎಂ.ಸುಕಮುನಿಯಪ್ಪ, ಆದಪ್ಪ ಬೂದಿವಾಳ, ಕರಿಯಪ್ಪ ಬೂದಗುಂಪಿ, ಮಾಳಪ್ಪ, ಗುತ್ತೇದಾರ ಬಿ.ಶಿವಪ್ಪ, ಏಳುಕುರಿ ಮಲ್ಲಯ್ಯ, ಭೀಮಣ್ಣ ಬನ್ನದ, ರುದ್ರಪ್ಪ ಕುರಿ, ವಿರೂಪಾಕ್ಷಿ ಸೇರಿದಂತೆ ನೂರಾರು ಜನರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿ, ಪ್ರಸಾದ ಸ್ವೀಕರಿಸಿದರು.
ಬೆ. 7.30ಕ್ಕೆ ಮಾಳಿಂಗರಾಯ ದೇವರ ಹೇಳಿಕೆಯನ್ನು ಬೀರಪ್ಪ ಪೂಜಾರಿ ನುಡಿದರು. ಬಸವ ಸಿಂಗಾರಾಗ್ಯಾನ, ಒಕ್ಕಲು ಮಗನಿಂದ ಅದಿನಂದಾನಾ, ಸುಣ್ಣದ ಗುಡಿಗೆ ಬಾಗಿ ನಡಿ ಅಂದಾನಾ.. ಈ ರೀತಿ ಹೇಳಿಕೆ ನುಡಿಗಳನ್ನು ಕೇಳಿದ ಭಕ್ತಾದಿಗಳು ಸಂತೋಷಗೊಂಡು ದೇವರಿಗೆ ಭಕ್ತಿಯಿಂದ ನಮಿಸಿದರು. ಕಳೆದ 7 ವರ್ಷಗಳಿಂದ ಪ್ರತಿ ವರ್ಷ ಯುಗಾದಿ ಪಾಢ್ಯದಂದು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಮಾಳಿಂಗರಾಯ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement