ನೀತಿ ಸಂಹಿತೆ ಉಲ್ಲಂಘನೆ: ವಜ್ಜಲ್ ವಿರುದ್ಧ ಪ್ರಕರಣ
ರಾಯಚೂರು: ಲಿಂಗಸ್ಗೂರು ಮಾಜಿ ಶಾಸಕ ಹಾಗೂ ಹಾಲಿ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್ ಅವರ ವಿರುದ್ಧ ನೀತಿ ಸಂಹಿತೆಯ ಉಲ್ಲಂಘನೆಯ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಲಿಂಗಸ್ಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿರುವ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುವಾರ ಚುನಾವಣೆ ಪ್ರಚಾರ ಸಭೆ ನಡೆಸಿದ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ಲಿಂಗಸ್ಗೂರು ಜೆಸ್ಕಾಂ ಎಇಇ ಹಾಗೂ ತಾಲೂಕಿನ ಚುನಾವಣೆ ಅಧಿಕಾರಿ ರಿಯಾಜ್ ಅವರಿಗೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಅವರು ನೀಡಿದ ವರದಿಯಾಧರಿಸಿ ಲಿಂಗಸ್ಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.