ಬಿಜೆಪಿ ಅಭ್ಯರ್ಥಿಯಿಂದ ಪ್ರಚಾರ ಕಚೇರಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಮುದಗಲ್, ಏ.12
ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿ ಟಿ.ಆರ್. ನಾಯಕ ಪಕ್ಷದ ಪ್ರಚಾರ ಕಚೇರಿಯನ್ನು ಗುರುವಾರ ಉದ್ಘಾಟಿಸಿದರು. ಮುದಗಲ್ ಪಟ್ಟಣದಿಂದ ಪ್ರಚಾರ ಆರಂಭಿಸಿರುವ ಅವರು ಪಟ್ಟಣದ ಐತಿಹಾಸಿಕ ದರಗಾ ಮತ್ತು ರಾಮಲಿಂಗೇಶ್ವರ ದೇವಸ್ಥಾನ, ಛತ್ತರ ಆಂಜನೇಯ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮತ ಯಾಚನೆ ಮಾಡಿದರು.
ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಲಿಂಗಸ್ಗೂರು ತಾಲೂಕು ಭಾರತಿಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಂ.ವಿ. ಜೋಷಿ, ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ, ಗುರುಬಸಪ್ಪ ಸಜ್ಜನ್, ವಿರೂಪಾಕ್ಷಪ್ಪ ಸಾಹುಕಾರ, ಅನಂತ ಕಿಶನರಾವ್ ದೇಶಪಾಂಡೆ, ಅನಂತರಾವ್ ದೇಶಪಾಂಡೆ, ಮುದಗಲ್ ಬಿಜೆಪಿ ಅಧ್ಯಕ್ಷ ರಾಘವೇಂದ್ರ, ಎಲ್.ಟಿ. ನಾಯಕ, ಹನುಮಂತಪ್ಪ ಕುಲಕರ್ಣಿ, ಪ.ಪಂ. ಸದಸ್ಯ ಎಂ.ಡಿ. ಸಾದಿಕ್ ಅಲಿ, ಗಫೂರ ಕಲಂದರಿಯಾ ಸೇರಿದಂತೆ ಕಾರ್ಯಕರ್ತರು ಇದ್ದರು.
--