ಶ್ರೀಶೈಲಂ ಭಕ್ತರಿಗೆ ಆರೋಗ್ಯ ಶಿಬಿರ
ರಾಯಚೂರು: ಶ್ರೀಶೈಲಂ ಯಾತ್ರೆ ಮುಗಿಸಿ ತಮ್ಮ ಊರುಗಳಿಗೆ ಮರಳುತ್ತಿದ್ದ ಭಕ್ತರಿಗೆ ಶುಕ್ರವಾರ ನಗರದ ಒಳಾಂಗಣ ಕ್ರೀಡಾಂಗಣ ಹಿಂಭಾಗದಲ್ಲಿ ಅನ್ನ ದಾಸೋಹ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ಭಗವತ್ ಭಕ್ತ ಮಂಡಳಿ ಹಾಗೂ ನರಸಿಂಹ ಪ್ರಭು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು ಚಾಲನೆ ನೀಡಿದರು. ಈ ವೇಳೆ ಶ್ರೀಶೈಲಂನಿಂದ ಮರಳಿದ ಭಕ್ತರ ಆರೋಗ್ಯದ ತಪಾಸಣೆಯನ್ನು ತಜ್ಞ ವೈದ್ಯರು ಮಾಡಿದರು.
ಆ ನಂತರದಲ್ಲಿ ಸಾವಿರಾರು ಸಂಖ್ಯೆಯ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯ ಭಕ್ತರು ದಾಸೋಹ ಕಾರ್ಯಕ್ರಮದಲ್ಲಿ ಊಟ ಸೇವಿಸಿ ತಮ್ಮ ಊರುಗಳಿಗೆ ಮರಳಿದರು.