ಅಕ್ರಮ ಮದ್ಯ ಜಪ್ತಿ, 8 ಜನರ ಬಂಧನ
ರಾಯಚೂರು: ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಹಂಚುತ್ತಿದ್ದ ಹಾಗೂ ಸಾಗಿಸುತ್ತಿದ್ದ 8 ಜನರನ್ನು ಬಂಧಿಸಿ, ಅವರಿಂದ ಅಪಾರ ಪ್ರಮಾಣದ ಮದ್ಯ ಜಪ್ತಿ ಮಾಡಲಾಗಿದೆ.
ರಾಯಚೂರು, ದೇವದುರ್ಗ ಮತ್ತು ಲಿಂಗಸ್ಗೂರು ತಾಲೂಕುಗಳ ಯರಗುಂಟಾ, ಗೆಜ್ಜೆಭಾವಿ, ಮುಷ್ಟೂರು, ಕಳ್ಳಿ ಲಿಂಗಸ್ಗೂರು ಸೇರಿದಂತೆ ವಿವಿಧೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಭಾಗಪ್ಪ, ಜಂಗ್ಲೆಪ್ಪ, ಬಸವರಾಜ, ಶಿವರಾಜ್, ಯಲ್ಲಪ್ಪ, ಅಮರೇಶ್, ಜಗದೀಶ್ ಮತ್ತು ಮಲ್ಲನಗೌಡ ಎಂಬುವವರನ್ನು ಬಂಧಿಸಿ ಅವರಿಂದ ವಿವಿಧ ಕಂಪನಿಗಳ ಒಟ್ಟು 23,195 ಬೆಲೆಯ ಮದ್ಯ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಲಿಂಗಸ್ಗೂರು, ರಾಯಚೂರು ಪಶ್ಚಿಮ, ಗಬ್ಬೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.