ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗುರು ಪಾಟೀಲ್ ಸಮ್ಮುಖದಲ್ಲಿ ಕೆಜೆಪಿ ಸೇರ್ಪಡೆ

Vishwanath S
Updated On : 14 Apr 2013, 12:34 pm

ಶಹಾಪುರ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರ ಕೆಲಸಗಳನ್ನು ಮೆಚ್ಚಿ ಯುವ ನಾಯಕ ಹಾಗೂ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ನೇತೃತ್ವದಲ್ಲಿ ಇಲ್ಲಿಯ ದಿಗ್ಗಿ ಬೇಸ್ ತಳವಾರ ಓಣಿಯ ಹಲವು ಪ್ರಮುಖರು ಕೆಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಗುರು ಪಾಟೀಲ, ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಆದ್ದರಿಂದ ಎಲ್ಲೆಡೆ ತಮಗೆ ಅಭೂತವೂರ್ಪ ಸ್ವಾಗತ ದೊರೆಯುತ್ತಿದೆ. ಎಲ್ಲಾ ಗ್ರಾಮಗಳಲ್ಲಿ ಕೆಜೆಪಿಯನ್ನು ಬೆಂಬಲಿಸಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನತೆ ಮಾಜಿ ಸಿಎಂ ಯಡಿಯೂರಪ್ಪನವರ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಕೆಜೆಪಿ ಬಾವುಟ ಹಾರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು. ಮುಖಂಡ ವಸಂತ ಸುರಪುರ ಇದ್ದರು. ಅಶೋಕ ತಳವಾರ, ಶರಣು ತಳವಾರ, ಶಿವಶರಣ ತಳವಾರ, ಪ್ರಕಾಶ, ಭೀಮರಾಯ, ದೇವಿಂದ್ರಪ್ಪ, ರಘು, ಮಲ್ಲಿನಾಥ ಬಡೆಗೇರಾ, ಮಂಜು, ಜೈಭೀಮ, ಈಶ್ವರ, ಶಿವು, ರಾಜು, ನಾಗು, ವಿಜಯ, ರವಿ, ಮಾನಪ್ಪ, ನಾಗು ಬಿ.ತಳವಾರ, ನಾಗೇಶ, ಈಶಪ್ಪ, ನಿಂಗು ಎನ್.ತಳವಾರ, ಶರಣು ಎ., ಭೀಮರಾಯ ಎಚ್, ಶರಬಪ್ಪ ಬಿ, ಕಲ್ಯಾಣ ತಳವಾರ ಕೆಜೆಪಿ ಸೇರಿದರು.

ದಿಗ್ಗಿ ಗ್ರಾಮದ ಹಲವರು ಕರವೇ ಸೇರ್ಪಡೆ
ಶಹಾಪುರ:
ವಿಧಾನಸಭೆ ಚುನಾವಣೆಗೆ ಕರವೇ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜ್ಯ ಸಂಚಾಲಕ ಬಸವರಾಜ ಎಂ. ಪಡಕೋಟೆ ಅವರ ನೇತೃತ್ವದಲ್ಲಿ ದಿಗ್ಗಿ ಗ್ರಾಮದ ಹಲವು ಯುವಕರು ಕರವೇ ಸೇರ್ಪಡೆಯಾದರು. ನಾಡು- ನುಡಿ ಜಾಗೃತಿ ಮತ್ತು ಸಮಾಜಮುಖಿಯಾಗಿ ಕರವೇ ಅಭಿವೃದ್ಧಿಯತ್ತ ಕಾಳಜಿ ವಹಿಸಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸಿ ಎಂದು ಪಡಕೋಟೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕರವೇ ಕರಬಸಪ್ಪ ಬಿರಾಳ, ಅಬ್ದುಲ್ ಹಾದಿಮನಿ, ಸತೀಶ ಪಂಚಭಾವಿ, ವೇಂಕಟೇಶ ಕಾಶಿರಾಜ ಇದ್ದರು. ಸೋಮಶೇಖರ ಗುಡಿಮನಿ, ಶರಣು ಶಖಾಪುರ, ವಿಶ್ವನಾಥ, ಚನ್ನು, ರಘು ಕುಮಾರ ದೊಡ್ಮನಿ, ಚಂದ್ರಶೇಖರ, ಶೇಖರ, ಸಾಯಬಣ್ಣ, ಪರಶು, ಚನ್ನು, ದೇವಪ್ಪ, ಶೇಖಪ್ಪ, ಭೀಮಪ್ಪ, ಅಂಬರೇಶ, ಭೀಮು ಸೇರ್ಪಡೆಯಾದರು.

ನೀರಡಗಿ ಕಾಂಗ್ರೆಸ್ ಒಬಿಸಿ ಕಾರ್ಯದರ್ಶಿ
ಸುರಪುರ:
ಕಾಂಗ್ರೆಸ್ ವರಿಷ್ಠರ ನಿರ್ದೇಶನದ ಮೇರೆಗೆ ಒಬಿಸಿ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಾಗಣಗೇರಿಯ ಅಚ್ಚಪ್ಪ ನೀರಡಗಿಯರನ್ನು ನೇಮಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಾಗೂ ಪಕ್ಷದ ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ, ಬಲವರ್ಧನೆಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿಂ. ವರ್ಗಗಳ ಜಿಲ್ಲಾಧ್ಯಕ್ಷ ಭಗವಂತರಾಯ ಬಳ್ಳೂಂಡಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement