ಗೆಲವಿಗಾಗಿ ಪಂಚಮುಖಿಗೆ ಪಾದಯಾತ್ರೆ
ರಾಯಚೂರು: ರಾಜ್ಯದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲವು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕೆಂದು ಹಾರೈಸಿ ನಗರದಿಂದ ತಾಲೂಕಿನ ಪಂಚಮುಖಿಗೆ ಜೆಡಿಎಸ್ ಗ್ರಾಮೀಣ ಪ್ರದೇಶದ ಕಾರ್ಯಕರ್ತರು ಶನಿವಾರ ಪಾದಯಾತ್ರೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ ನಾಯಕ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಎಸ್ಸಿ- ಎಸ್ಟಿ ಘಟಕದ ಅಧ್ಯಕ್ಷ ಯಲ್ಲಪ್ಪ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಉದ್ಘಾಟನೆ ಸಂದರ್ಭ ಪ್ರಮುಖರಾದ ಡಾ. ಶಿವರಾಜ್ ಪಾಟೀಲ್, ಶಿವಶಂಕರ್, ಪವನ್ ಕುಮಾರ್, ರಾಮಕೃಷ್ಣ ಇದ್ದರು.