ಜಿಲ್ಲೆಯಲ್ಲಿ 4 ನಾಮಪತ್ರ ಸಲ್ಲಿಕೆ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಶನಿವಾರ ಜಿಲ್ಲೆಯ ವಿವಿಧೆಡೆ ಒಟ್ಟು 4 ನಾಮಪತ್ರಗಳನ್ನು ಸಲ್ಲಿಸಲಾಗಿದೆ.
ರಾಯಚೂರು ನಗರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮೆಹೆರಾಜ್ ಬಾಷಾ ಹಾಗೂ ಸಿಪಿಎಂ ಅಭ್ಯರ್ಥಿಯಾಗಿ ವಿ.ಎಚ್. ಮಾಸ್ತರ್ ಹಾಗೂ ಮಾನವಿ ಕ್ಷೇತ್ರಕ್ಕೆ ಸುಶೀಲಮ್ಮ ಮುದಕಪ್ಪ ನಾಯಕ ಹಾಗೂ ಎಂ.ನಾಗರಾಜ ಮೇಧಾ ಪಕ್ಷೇತರ ಅಭ್ಯರ್ಥಿಗಳಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇನ್ನುಳಿದಂತೆ ಜಿಲ್ಲೆಯ ಯಾವುದೇ ವಿಧಾನಸಭೆ ಕ್ಷೇತ್ರದಲ್ಲಿ ಶನಿವಾರ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣೆ ವಿಭಾಗ ತಿಳಿಸಿದೆ.