ಲಾರಿ ಡಿಕ್ಕಿ; ಬಾಲಕಿ ಸಾವು
ರಾಯಚೂರು: ದೇವದುರ್ಗ ತಾಲೂಕಿನ ಜಿನ್ನಾಪುರ ಕ್ರಾಸ್ ಬಳಿ ಲಾರಿ ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿದ್ದಾಳೆ.
ಮೃತಳನ್ನು ಭಾಗ್ಯಶ್ರೀ ಎಂದು ಗುರುತಿಸಲಾಗಿದೆ. ಈಕೆಯು ತಮ್ಮ ಪಾಲಕರೊಂದಿಗೆ ಶ್ರೀಶೈಲಂಗೆ ತೆರಳಿ ತಮ್ಮೂರಿಗೆ ಮರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಅವರು ತೆರಳುತ್ತಿದ್ದ ವಾಹನ ದುರಸ್ತಿಗೀಡಾಗಿದೆ. ಈ ಸಂದರ್ಭ ಬಾಲಕಿಯು ರಸ್ತೆ ಮಗ್ಗುಲಿಗೆ ನಿಂತಿದ್ದಾಗ ವೇಗವಾಗಿ ಬಂದ ಲಾರಿಯು ನಿಯಂತ್ರಣ ತಪ್ಪಿ ಆಕೆಗೆ ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.