ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಾಂತಿ- ಭೇದಿ: ಗಮನಹರಿಸದ ಇಲಾಖೆ

Vishwanath S
Updated On : 14 Apr 2013, 12:32 pm

ಶಹಾಪುರ: ಪಟ್ಟಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ಹಲವು ಬಡಾವಣೆಗಳಲ್ಲಿ ವಾಂತಿ- ಭೇದಿ ಪ್ರಕರಣ ಕಾಣಿಸಿಕೊಳ್ಳತ್ತಿದ್ದು, ಮುಂಜಾಗ್ರತಾ ಕ್ರಮದ ಬಗ್ಗೆ ಗಮನ ನೀಡದೆ ತಾಲೂಕಾ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಪುರಸಭೆ ಹಾಗೂ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಬಹುತೇಕ ಕಡೆ ಚರಂಡಿಗಳಲ್ಲಿ ನಿಂತ ನೀರು, ಕೆಲವು ಬಡಾವಣೆಗಳಲ್ಲಿ ಕಲುಷಿತ ನೀರು ನಳದಲ್ಲಿ ಬರುತ್ತಿರುವುದು, ಕೆಲವೆಡೆ ನೀರಿನ ಕೊರತೆ, ವಿಪರೀತ ಸೊಳ್ಳೆಗಳ ಹಾವಳಿ, ಇದರ ಜತೆಗೆ ಬಿಸಿಲಿನ ಪ್ರಖರತೆಗೆ ವಾಂತಿ- ಭೇದಿ ಪ್ರಕರಣ ಕಾಣಿಸಿಕೊಳ್ಳುತ್ತಿದೆ.
ಪುರಸಭೆ ಸ್ವಚ್ಛತಾ ಕಾಮಗಾರಿಗೆ ಹಾಗೂ ಶುದ್ಧ ಕುಡಿವ ನೀರು ಪೂರೈಕೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಬ್ಲೀಚಿಂಗ್ ಪೌಡರ್ ಬಳಕೆ, ಚರಂಡಿ ಹೂಳೆತ್ತುವ ಕಾರ್ಯ ಕೈಗೊಳ್ಳದೇ ಪುರಸಭೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ. ಇದು ಒಂದೆಡೆಯಾದರೆ ಆರೋಗ್ಯ ಇಲಾಖೆ ಪುರಸಭೆಯೊಂದಿಗೆ ಸೇರಿ ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಇರುವುದಕ್ಕೆ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿಲಾಗಿದೆ.
ವಾರ್ಡ್ ನಂ. 2ರಲ್ಲಿ ಒಟ್ಟು 19 ಮಕ್ಕಳಿಗೆ ವಾಂತಿ- ಭೇದಿಯಾಗಿದ್ದು, ಪರಿಸ್ಥಿತಿ ಹತೋಟಿ ಮೀರುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡುವಂತೆ ಆಗ್ರಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement