ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಿ

Lingaraj Badiger
Updated On : 15 Apr 2013, 11:23 am

ಕ.ಪ್ರ. ವಾರ್ತೆ, ರಾಯಚೂರು, ಏ.14
ನಗರದ ಹರಿಜನವಾಡ ಪ್ರದೇಶದಲ್ಲಿ ಭಾನುವಾರ ನವರತ್ನ ಯುವಕ ಸಂಘದಿಂದ ಡಾ. ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಷಡಕ್ಷರಯ್ಯಸ್ವಾಮಿ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾನವತಾವಾದಿಯ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.
ನ್ಯಾಯಬೆಲೆ ಅಂಗಡಿಯ ಮಾಲೀಕ ಗಣೇಶ ಪಾಳ್ಯಂ ಮಾತನಾಡಿ, ದಲಿತರ ಏಳಿಗೆಗೆ ಹಗಲಿರುಳು ಶ್ರಮಿಸಿದ ಅಂಬೇಡ್ಕರ್ ಅವರಂಥವರ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚು ಅವಶ್ಯ ಎಂದು ಹೇಳಿದರು.
ಅಂಬೇಡ್ಕರ್, ಬಾಬೂಜಿ ಎರಡು ಕಣ್ಣುಗಳಿದ್ದಂತೆ: ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಮಾತನಾಡಿ, ದಲಿತ ಸಮುದಾಯದವರಿಗೆ ಡಾ. ಬಾಬು ಜಗಜೀವನರಾಂ ಹಾಗೂ ಅಂಬೇಡ್ಕರರು ಎರಡು ಕಣ್ಣುಗಳಿದ್ದಂತೆ. ದಲಿತರ ಏಳಿಗೆಗೆ ನಿರಂತರ ಹೋರಾಡಿದ ಈ ನಾಯಕರ ಜಯಂತಿ ಸಂದರ್ಭ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತವು ಭಾವಚಿತ್ರದ ಬೃಹತ್ ಮೆರವಣಿಗೆಯ ಮೂಲಕ ಆಚರಿಸಬೇಕು ಎಂದು ಆಗ್ರಹಿಸಿದರು.
ನವರತ್ನ ಯುವಕ ಸಂಘದ ಅಧ್ಯಕ್ಷ ಹುಲಿಗೆಪ್ಪ, ಗೌರವಾಧ್ಯಕ್ಷ  ಆರ್.ಆಂಜಿನಯ್ಯ, ಆಹಾರ ಇಲಾಖೆಯ ಅಧಿಕಾರಿಗಳಾದ ಸೂರ್ಯಪ್ರಕಾಶ್, ಚಂದ್ರಶೇಖರ್ ರೆಡ್ಡಿ, ಹುಲಿಗೆಪ್ಪ ಕೊಲಿಮಿ, ಚಂದ್ರುಭಂಡಾರಿ, ಲಕ್ಷ್ಮಿನಾರಾಯಣ ಭಂಡಾರಿ ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು.
ಸಾರಿಗೆ ಸಂಸ್ಥೆಯಿಂದ..: ನಗರದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮ ಭಾನುವಾರ ಆಯೋಜಿಸಲಾಗಿತ್ತು.
ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ವರ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಮುಖರಾದ ಎನ್.ರಂಗನಾಥ್, ಮಧು ಚಕ್ರವರ್ತಿ, ದೇವೇಂದ್ರಪ್ಪ, ಹನುಮಂತು, ಶಿವಕುಮಾರ್, ರಾಮಣ್ಣ, ರಾಮಕುಮಾರ್ ಸೇರಿದಂತೆ ಅನೇಕರಿದ್ದರು.
ಬಿಎಸ್ಸೆನ್ನೆಲ್ ಕಚೇರಿ: ನಗರದ ಬಿಎಸ್ಸೆನ್ನೆಲ್ನ ಹಿರಿಯ ಉಪ ವಿಭಾಗೀಯ ಎಂಜಿನಿಯರ್ ಕಚೇರಿಯಲ್ಲಿ ಭಾನುವಾರ ಡಾ. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು. ಮುಖ್ಯ ದೂರವಾಣಿ ವಿನಿಮಯ ಕೇಂದ್ರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಕಾರ್ಯನಿರ್ವಾಹಕಾಧಿಕಾರಿ ರಂಗನಾಥ್  ಮತ್ತಿತರರು ಅಂಬೇಡ್ಕರರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.
ರವಿಕುಮಾರ್, ಚಾಂದ್ ಪಾಷಾ, ರಾಘವೇಂದ್ರ, ಎಂಡಿ ಹನೀಫ್, ಮಲ್ಲಿಕಾರ್ಜುನ, ಸಂತೋಷ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement