ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕುಡಿವ ನೀರಿನ ಅರವಟಿಗೆ ಪ್ರಾರಂಭ

Lingaraj Badiger
Updated On : 15 Apr 2013, 11:23 am

ರಾಯಚೂರು: ನಗರದ ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಈಚೆಗೆ ವಿಮಾ ನೌಕರರ ಸಂಘದವತಿಯಿಂದ ಕುಡಿಯುವ ನೀರಿನ ಅರವಟಿಗೆಯನ್ನು ಪ್ರಾರಂಭಿಸಲಾಯಿತು.
ವಿಮಾ ನೌಕರರ ಸಂಘದ ಹಿರಿಯ ಸದಸ್ಯ ಎಸ್.ಎಸ್.ಜಹಾಗೀರದಾರ್ ಅವರು ಅರವಟಿಗೆ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ.ಶರಣಗೌಡ ಮಾತನಾಡಿ, ವಿಮಾ ನೌಕರರ ಸಂಘವು ಕಳೆದ ಅನೇಕ ವರ್ಷಗಳಿಂದ ಬೇಸಿಗೆಯ ಸಂದರ್ಭದಲ್ಲಿ ಜನತೆದೆ ಕುಡಿಯುವ ನೀರೊದಗಿಸುವ ಕಾರ್ಯ ಮಾಡುತ್ತಿದೆ. ಹಾಗೆಯೇ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದ ಪರ ಕಾಳಜಿ ಪ್ರದರ್ಶಿಸಿದೆ ಎಂದರು.
ಸಂಘದ ಕಾರ್ಯದರ್ಶಿ ವೀರೇಶ್, ಪ್ರಧಾನ ಕಾರ್ಯದರ್ಶಿ ಎಂ.ರವಿ, ಉಪಾಧ್ಯಕ್ಷೆ ವಂದನಾಬಾಯಿ, ಜಂಟಿ ಕಾರ್ಯದರ್ಶಿ ವೈ.ಬಸವರಾಜ್, ಖಜಾಂಚಿ ರಾಘವೇಂದ್ರ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement