ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ' ಅಕ್ರಮ; ಆರೋಪ

Lingaraj Badiger
Updated On : 15 Apr 2013, 11:19 am

ಮುದಗಲ್: ಪಟ್ಟಣದ ಸಮೀಪದ ಮಟ್ಟೂರು ಗ್ರಾಪಂ ವ್ಯಾಪ್ತಿಯ ಗುಡಿಹಾಳ ಮತ್ತು ಕಡತರಾಳ ಗ್ರಾಮದ ನಾಲೆಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಚೆಕ್ ಡ್ಯಾಂ ನಿರ್ಮಿಸುವಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಹೈದರಾಬಾದ್ ಕರ್ನಾಟಕ ವಿಮೋಚನಾ ಸಂಘಟನೆಯ ಸಂಚಾಲಕ ಶರಣಪ್ಪ, ಯಮನಪ್ಪ ಆರೋಪಿಸಿದ್ದಾರೆ. ಪ್ರಸಕ್ತ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಹೆಚ್ಚುವರಿ ಕ್ರಿಯಾಯೋಜನೆ ರೂಪಿಸಿ ತಲಾ 1 ಲಕ್ಷ ವೆಚ್ಚದ ಯೋಜನೆ ಸಿದ್ಧಪಡಿಸಿ ಎಂಐಸಿ ಬರೆದು ಕಾಮಗಾರಿ ಮಾಡಲಾಗುತ್ತಿದೆ. ಹಳೆ ಚೆಕ್ ಡ್ಯಾಂಗೆ ಹೊಸ ಸಿಮೆಂಟ್ ಹಚ್ಚಿ ಬಿಲ್ ಪಾವತಿಸಲು ಗ್ರಾಪಂ ಸದಸ್ಯ ಚೌರಪ್ಪ, ಬಸವರಾಜ ಮುಂದಾಗಿದ್ದಾರೆ. ಕಾಮಗಾರಿಗೆ 10 ರಿಂದ 20 ಸಾವಿರ ಮಾತ್ರ ಖರ್ಚು ಮಾಡಿದ್ದು, ಉಳಿದ ಹಣವನ್ನು ಬೋಗಸ್ ಬಿಲ್ ಪಾವತಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಅವ್ಯವಹಾರ ಸಂಬಂಧಿಸಿದ ಜಿಪಂ ಎಂಜನಿಯರ್ ಪ್ರಕಾಶ ಅವರಿಗೆ ಗೊತ್ತಿದ್ದರೂ ಎಂಬಿ(ಅಳತೆ ಪುಸ್ತಕ) ಬರೆಯಲು ಮುಂದಾಗಿದ್ದಾರೆ. ಈ ಅವ್ಯವಹಾರದಲ್ಲಿ ಎಂಜನಿಯರ್ ಕೂಡ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದರು. ಸಂಬಂಧಿಸಿದ ಮೇಲಾಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ದುರುಗಮ್ಮ ಜಾತ್ರೆ
ಮುದಗಲ್: ಸಮೀಪದ ಮಟ್ಟೂರು ಗ್ರಾಮದ ಹೊರವಲಯದಲ್ಲಿರುವ ದುರುಗಮ್ಮ ದೇವಿ ಜಾತ್ರೆ ಅದ್ಧೂರಿಯಾಗಿ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಅಮವಾಸ್ಯೆಯಂದು ಗ್ರಾಮಕ್ಕೆ ಕರೆತಂದು ದ್ಯಾಮಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎರಡು ದಿನಗಳ ನಂತರ ಭಾಜಾ ಭಜಂತ್ರಿಯೋಂದಿಗೆ ಪುನಃ ದೇವಿಯನ್ನು ಗ್ರಾಮದ ಹೊರವಲಯದಲ್ಲಿ ಕೂಡಿಸಲಾಯಿತು. ಜಾತ್ರೆ ಅಂಗವಾಗಿ ಗ್ರಾಮದ ಮಹಿಳೆಯರು ಕಳಸ ಕನ್ನಡಿಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ, ಗ್ರಾಪಂ ಉಪಾಧ್ಯಕ್ಷ ಶರಣಪ್ಪ ಹುಲ್ಲೂರ, ಸದಸ್ಯರಾದ ರಾಮಣ್ಣ ಭಜಂತ್ರಿ, ಹೋಳೆಯಪ್ಪ ಹರಿಜನ, ಕೆಂಚಪ್ಪ ನೀರಗುಂಟಿ, ಮುಖಂಡರಾದ ಮೌನೇಶ ಕಂಭಾರ, ಮಲ್ಲಯ್ಯ, ಬಸವರಾಜ, ಮುಂತಾದವರು ಉಪಸ್ಥಿತರಿದ್ದರು.
ಕೆಜೆಪಿಗೆ ನೇಮಕ
ರಾಯಚೂರು: ಕೆಜೆಪಿ ಜಿಲ್ಲಾ ಯುವ ಘಟಕದ ಜಿಲ್ಲಾ ಕಚೇರಿ ಕಾರ್ಯದರ್ಶಿಯಾಗಿ ಮಂಜುನಾಥ ಪಾಟೀಲ್ ವಟಗಲ್ ಅವರನ್ನು ನೇಮಿಸಲಾಗಿದೆ. ಅದೇ ರೀತಿ ರಾಯಚೂರು ನಗರ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಪಾಟೀಲ್ ಅವರನ್ನು ನೇಮಿಸಲಾಗಿದೆ ಎಂದು ಕೆಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ್ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement