ಲಿಂಗಸ್ಗೂರಿಂದ ಹೂಲಗೇರಿ, ಮಸ್ಕಿ ಪ್ರತಾಪಗೌಡ ಕಣಕ್ಕೆ
ಲಿಂಗಸ್ಗೂರು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಲಿಂಗಸ್ಗೂರು ಮತ್ತು ಮಸ್ಕಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಜನತೆಯಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ಹೈಕಮಾಂಡ್ ಭಾನುವಾರ 2ನೇ ಪಟ್ಟಿ ಪ್ರಕಟಪಡಿಸಿದ್ದು, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆಗೊಳಿಸಿದ್ದ 147 ಅಭ್ಯರ್ಥಿಗಳ ಪ್ರಥಮ ಪಟ್ಟಿಯಲ್ಲಿ ಲಿಂಗಸ್ಗೂರು ಕ್ಷೇತ್ರದಿಂದ ಪಾಮಯ್ಯ ಮುರಾರಿ ಹೆಸರು ಕೇಳಿಬಂದಿತ್ತು. ಮಸ್ಕಿ ಕ್ಷೇತ್ರದ ಅಭ್ಯರ್ಥಿ ಹೆಸರು ಮಾತ್ರ ಪ್ರಕಟಿಸಿರಲಿಲ್ಲ.
ಭಾನುವಾರ ಎರಡನೇ ಬಾರಿ ಪ್ರಕಟಗೊಳಿಸಿದ ಪಟ್ಟಿಯಲ್ಲಿ ಲಿಂಗಸ್ಗೂರು ಕ್ಷೇತ್ರದ ಅಭ್ಯರ್ಥಿ ಹೆಸರು ಬದಲಾವಣೆ ಮಾಡಿ ಪಾಮಯ್ಯ ಮುರಾರಿ ಬದಲು ದುರುಗಪ್ಪ ಸಂಗಪ್ಪ ಹೂಲಗೇರಿ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿದು ಬಂದಿದೆ. ಮಸ್ಕಿ ಕ್ಷೇತ್ರದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ಹೆಸರು ಪ್ರಕಟಪಡಿಸಿರುವುದು ಗೊತ್ತಾಗಿದೆ.