ಸಿಂಧನೂರು; ಆದರ್ಶ ಕಾಲೋನಿಯ ರವಿ ಕಾಣೆ
ಸಿಂಧನೂರು: ನಗರದ ಆದರ್ಶ ಕಾಲೋನಿಯ 28 ವರ್ಷದ ಯುವಕ ಎಂ.ವಿ. ರವಿ ಕಾಣೆಯಾಗಿದ್ದಾನೆ ಎಂದು ಆತನ ತಂದೆ ಎಂ.ವಿ. ರತ್ನಯ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ ಜೂ.23, 2012 ರಂದು ಬೆ.10 ಗಂಟೆಗೆ ಮನೆಯಿಂದ ಅಂಗಡಿಗೆ ಹೋಗುವುದಾಗಿ ಹೇಳಿ ಹೋದ ರವಿ ಪುನಃ ಮನೆಗೆ ವಾಪಸ್ ಬಂದಿಲ್ಲ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಫೇಸ್ಬುಕ್ನಲ್ಲಿ ಕಾಣಿಸಿಕೊಂಡಿದ್ದು ಹುಡುಕಲು ಪ್ರಯತ್ನಿಸಿದಾಗ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾನೆ. ಕಮ್ಮಾ ಜಾತಿಯ ರವಿ ಗೊಬ್ಬರದ ಅಂಗಡಿ ನೋಡಿಕೊಳ್ಳುತ್ತಿದ್ದನು. ಕೆಂಪು ಬಣ್ಣ, ದುಂಡುಮುಖ, ಆಫ್ಶರ್ಟ್, ಪ್ಯಾಂಟ್ ಧರಿಸಿದ್ದ ಆತ 5.6 ಅಡಿ ಎತ್ತರವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕನ್ನಡ, ತೆಲಗು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾನೆ. ಇತನ ಸುಳಿವು ಸಿಕ್ಕವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪಿಎಸ್ಐ ಲಿಂಗಪ್ಪ ಕೋರಿದ್ದಾರೆ.