ಅಭ್ಯರ್ಥಿಗಳಿಂದ ಉಮೇದುವಾರಿಕೆ
ಶಹಾಪುರ: ಶುಭ ಸೋಮವಾರ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಮತಕ್ಷೇತ್ರದಲ್ಲಿ ನಾಮಪತ್ರ ತುಂಬುವ ಭರಾಟೆ ಸೋಮವಾರ ಜೋರಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಶರಣಬಸಪ್ಪಗೌಡ ದರ್ಶನಾಪುರ, ಕೆಜೆಪಿ ಅಭ್ಯರ್ಥಿಯಾಗಿ ಗುರುಪಾಟೀಲ ಶಿರವಾಳ, ಬಿಎಸ್ಆರ್ದಿಂದ ಶಂಕ್ರಣ್ಣ ವಣಿಕ್ಯಾಳ, ಕರವೇ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಬಸವರಾಜ ಪಡಕೋಟೆ ಮತ್ತು ಬಿಎಸ್ಪಿ ಅಭ್ಯರ್ಥಿಯಾಗಿ ಮಹ್ಮದ್ ಅನ್ವರ ಪಾಷಾ ನಾಮಪತ್ರ ಸಲ್ಲಿಸಿದರು.
ವಕೀಲರ ವೇದಿಕೆಗೆ ಶರಣಗೌಡ
ಯಾದಗಿರಿ: ಕರ್ನಾಟಕ ಜನತಾ ಪಕ್ಷದ ಜಿಲ್ಲೆಯ ವಕೀಲರ ವೇದಿಕೆ ಅಧ್ಯಕ್ಷರನ್ನಾಗಿ ಇಲ್ಲಿಯ ಶರಣಗೌಡ ಅಲ್ಲಿಪುರ ಅವರನ್ನು ನೇಮಕ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಡಾ. ಮಲ್ಲನಗೌಡ ಪಾಟೀಲ ಉಕ್ಕಿನಾಳ ಆದೇಶಿಸಿದ್ದಾರೆ. ಜಿಲ್ಲೆಯ ಕೆಜೆಪಿ ಅಭ್ಯರ್ಥಿಗಳ ಗೆಲವಿಗೆ ಹಾಗೂ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ಎಲ್ಲ ಜಾತಿ ಜನಾಂಗದ ಜನರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲನಗೌಡ ತಿಳಿಸಿದ್ದಾರೆ.