ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಮಿಷಕ್ಕೆ ಒಳಗಾದೀರಿ.. ಜೋಕೆ!: ಕುಮಾರಸ್ವಾಮಿ ಎಚ್ಚರಿಕೆ

Lingaraj Badiger
Updated On : 16 Apr 2013, 11:05 am

ಸಿಂಧನೂರು: ವಿಧಾನಸಭೆ ಚುನಾವಣೆ ಸಮೀಪಿಸಿದ್ದು ಕರ್ತವ್ಯನಿರತ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಯಾವ ಆಮಿಷಕ್ಕೆ ಒಳಗಾಗಬೇಡಿ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಆದ್ಯತೆ ನೀಡಬೇಕೆಂದು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ತಾಕೀತು ಮಾಡಿದರು.
ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಸಭೆ ಹಾಗೂ ಚುನಾವಣಾ ನೀತಿ-ನಿಯಮಗಳ ಬಗ್ಗೆ ತಿಳಿವಳಿಕೆ ಸಭೆಯಲ್ಲಿ ಅವರು ಮಾತನಾಡಿದರು.
ಪರವಾನಗಿ ಕಡ್ಡಾಯ: ಯಾವುದೇ ರಾಜಕೀಯ ಪಕ್ಷಗಳು ಚುನಾವಣೆ ಅಧಿಕಾರಿಗಳ ಅನುಮತಿಯಿಲ್ಲದೆ ಕಾರ್ಯಕ್ರಮ ಮಾಡಿದ್ದೇ ಆದರೆ ಅಂತಹ ಪಕ್ಷಗಳ ಮೇಲೆ ಕಾನೂನು ಕ್ರಮ ತಗೆದುಕೊಳ್ಳಲಾಗುವುದು. ಸರ್ಕಾರಿ ನೌಕರರು ಹೆಚ್ಚು ಮತದಾನದಿಂದ ವಂಚಿತರಾಗುತ್ತಿದ್ದಾರೆ. ಅಂತಹ ನೌಕರರಿಗೆ ಈ ಬಾರಿ 12ಎ ಪಾರಂ ಕೊಡಲಾಗುತ್ತದೆ. ಆ ಪಾರಂಅನ್ನು ನೋಡಲ್ ಅಧಿಕಾರಿಗೆ ಕೊಟ್ಟರೆ ನಿಮ್ಮ ಮತದಾನದ ಹಕ್ಕು ಚಲಾಯಿಸಿದಂತೆ. ತಾಲೂಕಿನಲ್ಲಿ ಯಾವುದಾದರೂ ಸಭೆ- ಕಾರ್ಯಕ್ರಮಗಳು ಆಗಬೇಕೆಂದರೆ ಮೊದಲು ಚುನಾವಣಾಧಿಕಾರಿಗಳಿಂದ ಪರವಾನಗಿ ಪತ್ರ ಪಡೆದುಕೊಳ್ಳಬೇಕು ಎಂದರು.
ಯಾವ ಸ್ಥಳದಲ್ಲಿ ಸಭೆ ನಡೆಸಬೇಕೆಂಬುದನ್ನು ಆಯಾ ಊರಿನ ಪಿಡಿಒಗಳು ಜಾಗ ತೋರಿಸಬೇಕು. ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಎಷ್ಟು ಬ್ಯಾನರ್ ಹಾಕಿದ್ದಾರೆ. ಯಾವ ಯಾವ ಅಡುಗೆಗಳನ್ನು ಮಾಡಿದ್ದಾರೆ. ಎಷ್ಟು ಜನರು ಸೇರಿದ್ದಾರೆ ಎಂಬುದನ್ನೆಲ್ಲ ವಿಡಿಯೋ ಮಾಡಿ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿಗಳಿಗೆ ತಲುಪಿಸಬೇಕು ಎಂದು ಸೂಚಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ ಸಭೆ- ಸಮಾರಂಭಗಳು ಮುಗಿದ ನಂತರ ಕಾರ್ಯಕ್ರಮಗಳಲ್ಲಿ ಹಾಕಿರುವ ಬ್ಯಾನರ್, ಕಟೌಟ್, ಶಾಮಿಯಾನ, ಮೈಕ್ ಸೆಟ್‌ಗಳನ್ನು ತೆಗೆಯಲು ಆದೇಶಿಸಬೇಕು. ಸಭೆ- ಸಮಾರಂಭಗಳಲ್ಲಿ ಉಪಯೋಗಿಸಿದ ಪ್ರತಿಯೊಂದು ವಸ್ತುಗಳಿಗೆ ತೆರಿಗೆ ಹಾಕಬೇಕು ಎಂದು ತಿಳಿಸಿದರು.
ದೌರ್ಜನ್ಯ- ತಕ್ಷಣ ತಿಳಿಸಿ: ಯಾರಾದರೂ ಡೀಲಿಂಗ್ ಮಾಡುವಾಗ ಕೈಗೆ ಸಿಕ್ಕರೆ ಅವರು ಎಷ್ಟೇ ಜನರಿರಲಿ, ಯಾರೇ ಆಗಲಿ ಕೂಡಲೇ ಅವರ ಮೇಲೆ ದೂರು ದಾಖಲಿಸಬೇಕು. ಒಂದು ವೇಳೆ ಅಧಿಕಾರಿಗಳ ಮೇಲೆ ದೌರ್ಜನ್ಯವೆಸಗಿದರೆ ಕೂಡಲೇ ಫೋನ್ ಮೂಲಕ ತಹಸೀಲ್ದಾರರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ತಿಳಿಸಿ ಪೊಲೀಸರ ಜೊತೆಗೂಡಿ ಸ್ಥಳಕ್ಕೆ ಹೋಗಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದರು.
ಜಾಗೃತಿ ಮೂಡಿಸಿ: ತಾಪಂ ಇಒ ರಮೇಶ ತಳವಾರ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ಪಿಡಿಒ ಅಧಿಕಾರಿಗಳು ತಂಡಗಳನ್ನು ರಚನೆ ಮಾಡಿಕೊಂಡು ಜನಸಾಮಾನ್ಯರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಇಒ ವೃಷಭೇಂದ್ರಯ್ಯಸ್ವಾಮಿ,ನಗರಸಭೆ ಪೌರಾಯುಕ್ತ ನಾಸಿರ್ ಅಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement