ಜಿಲ್ಲೆಯಲ್ಲಿ 50 ಅಭ್ಯರ್ಥಿಗಳ ಉಮೇದುವಾರಿಕೆ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.15
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ಸೋಮವಾರ 50 ನಾಮಪತ್ರ ಸಲ್ಲಿಕೆಯಾಗಿವೆ.
ಜಿಲ್ಲೆಯ ಒಟ್ಟು 7 ಕ್ಷೇತ್ರಗಳಿಗೆ ಸೋಮವಾರ ಒಟ್ಟು 50 ನಾಮಪತ್ರಗಳನ್ನು ಸಲ್ಲಿಸಲಾಗಿದ್ದು, ರಾಯಚೂರು ನಗರ ಕ್ಷೇತ್ರದಲ್ಲಿ 4, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 6, ಮಾನವಿಯಲ್ಲಿ 12, ದೇವದುರ್ಗದಲ್ಲಿ 5, ಲಿಂಗಸ್ಗೂರಿನಲ್ಲಿ 8, ಸಿಂಧನೂರಿನಲ್ಲಿ 11 ಹಾಗೂ ಮಸ್ಕಿ ಕ್ಷೇತ್ರಕ್ಕೆ 4 ನಾಮಪತ್ರ ಸಲ್ಲಿಕೆಯಾಗಿವೆ.
ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ..
ರಾಯಚೂರು ನಗರ: ತ್ರಿವಿಕ್ರಮ್ ಜೋಷಿ- ಬಿಜೆಪಿ, ಮಹಮ್ಮದ್ ಖಲೀಲ್- ಪಕ್ಷೇತರ, ಪೂಜಾಗಾಂಧಿ- ಬಿಎಸ್ಸಾರ್ ಕಾಂಗ್ರೆಸ್, ಹಾರೇಸ್ ಸಿದ್ದಿಖಿ- ಬಿಎಸ್ಪಿ.
ರಾಯಚೂರು ಗ್ರಾಮೀಣ: ರಾಜಾ ಅಮರೇಶ್ವರ ನಾಯಕ- ಜೆಡಿಎಸ್, ರಾಜಾ ರಾಯಪ್ಪ ನಾಯಕ- ಕಾಂಗ್ರೆಸ್, ತಿಪ್ಪರಾಜ್ ಹವಾಲ್ದಾರ್- ಬಿಜೆಪಿ.
ಮಾನವಿ: ರಾಜಾ ವೆಂಕಟಪ್ಪ ನಾಯಕ- ಜೆಡಿಎಸ್, ಮಲ್ಲಪ್ಪ ಬಂಗಾರಿ- ಬಿಎಸ್ಪಿ, ಹಂಪಯ್ಯ ನಾಯಕ- ಕಾಂಗ್ರೆಸ್, ಗಂಗಾಧರ ನಾಯಕ- ಕೆಜೆಪಿ, ಬಸನಗೌಡ- ಬಿಎಸ್ಸಾರ್ ಕಾಂಗ್ರೆಸ್, ಅಯ್ಯಮ್ಮ ನಾಯಕ- ಬಿಜೆಪಿ, ವೆಂಕೋಬ ನಾಯಕ- ಬಿಜೆಪಿ, ಮುದುಕಪ್ಪ ನಾಯಕ-ಸಿಪಿಎಂ.
ದೇವದುರ್ಗ: ಶಿವನಗೌಡ ನಾಯಕ- ಬಿಜೆಪಿ, ವೆಂಕಟೇಶ ನಾಯಕ- ಕಾಂಗ್ರೆಸ್, ಚೆನ್ನನಗೌಡ- ಬಿಎಸ್ಸಾರ್ ಕಾಂಗ್ರೆಸ್.
ಲಿಂಗಸ್ಗೂರು: ಎಚ್.ಬಿ. ಮುರಾರಿ- ಕೆಜೆಪಿ, ನಾಗರಾಜ- ಕಾಂಗ್ರೆಸ್, ಮಾನಪ್ಪ ವಜ್ಜಲ್- ಜೆಡಿಎಸ್, ತಿಪ್ಪಣ್ಣ ನಾಯಕ- ಬಿಜೆಪಿ, ಸಿದ್ದಪ್ಪ ಬಂಡಿ- ಬಿಎಸ್ಸಾರ್ ಕಾಂಗ್ರೆಸ್, ಗಂಗಮ್ಮ ಬಂಡಿ- ಬಿಎಸ್ಸಾರ್ ಕಾಂಗ್ರೆಸ್, ದುರ್ಗಪ್ಪ ಹೂಲಗೇರಿ- ಕಾಂಗ್ರೆಸ್.
ಸಿಂಧನೂರು: ಕೆ.ಕರಿಯಪ್ಪ- ಬಿಎಸ್ಸಾರ್ ಕಾಂಗ್ರೆಸ್, ಶಾಂತನಗೌಡ- ಜೆಡಿಯು, ವೆಂಕಟರಾವ್ ನಾಡಗೌಡ- ಜೆಡಿಎಸ್, ಹಂಪನಗೌಡ ಬಾದರ್ಲಿ- ಕಾಂಗ್ರೆಸ್, ರಾಜಶೇಖರ ಪಾಟೀಲ್- ಕೆಜೆಪಿ, ಶೇಷಗಿರಿರಾವ್- ಬಿಜೆಪಿ, ಬಾಷುಮಿಯಾ-ಸಿಪಿಐ.
ಮಸ್ಕಿ: ಅಮರೇಶ ದಿನ್ನಿ ನಾಯಕ- ಜೆಡಿಎಸ್, ಮಹಾದೇವಪ್ಪಗೌಡ- ಬಿಜೆಪಿ, ಪ್ರತಾಪಗೌಡ ಪಾಟೀಲ್- ಕಾಂಗ್ರೆಸ್, ಶೇಖರಪ್ಪ ತಳವಾರ- ಬಿಎಸ್ಸಾರ್ ಕಾಂಗ್ರೆಸ್