ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಡಾ. ಅಂಬೇಡ್ಕರ್ ಜಯಂತಿ ಆಚರಣೆ

Lingaraj Badiger
Updated On : 17 Apr 2013, 11:50 am

ಮುದಗಲ್: ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ, ವಿವಿಧ ದಲಿತ ಸಂಘಟನೆಗಳು ವಿವಿಧೆಡೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.
ಪಟ್ಟಣದ ಪೊಲೀಸ್ ಠಾಣೆ ಸೇರಿದಂತೆ ವೆಂಕಟರಾಯನಪೇಟೆಯ ಹರಿಜನವಾಡಾ, ಸಿದ್ದಾರೂಢ ಮಠ, ಶೀಲವಂತಮ್ಮ ಗುಡಿ ಹತ್ತಿರದ ಸಮುದಾಯ ಭವನದಲ್ಲಿ, ಬಸ್ಸ್ಟ್ಯಾಂಡ್ ಹತ್ತಿರ ಸೇರಿದಂತೆ ವಿವಿಧೆಡೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಿದರು.
ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ನೇತೃತ್ವದಲ್ಲಿ ನೆರವೇರಿಸಲಾಗಿತ್ತು. ದಲಿತ ಮುಖಂಡರಾದ ಆನಂದ ಪೇಂಟರ್, ವೆಂಕಟೇಶ ಹಿರೇಮನಿ, ಶರಣಪ್ಪ, ಬಸವರಾಜ ಬಂಕದಮನಿ, ಬಸವರಾಜ ಹವಳಿ, ರಘುರಾಮ, ಪ್ರತಾಪ ಹಿರೇಮನಿ, ಮುದಿಯಪ್ಪ ಚಲುವಾದಿ, ರಾಮಲಿಂಗಪ್ಪ ಹಾದಿಮನಿ, ಷಣ್ಮುಖಪ್ಪ ಚಲುವಾದಿ, ಪರಶುರಾಮ, ರಂಗನಾಥ, ರಾಮು ಚಿರ್ಲಿ, ಪೂರ್ಣಾನಂದ, ಈಶ್ವರಪ್ಪ, ಕನಕಪ್ಪ, ಪಪಂ ಸದಸ್ಯ ಶಿವರಾಜ ತಳವಾರ, ಅಮೀರಬೇಗ್ ಉಸ್ತಾದ, ರಾಘವೆಂದ್ರ ದೇಶಪಾಂಡೆ, ಜೋಸೆಫ್ ಇರ್ಲಾ, ಮುನ್ವರ್ಖಾನ್, ರಘುವೀರ, ಪ್ರಮೋದ, ಕೃಷ್ಣಾ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement