ಲಿಂಗಸ್ಗೂರು 10, ಮಸ್ಕಿ 6 ನಾಮಪತ್ರ ಸಲ್ಲಿಕೆ
ಲಿಂಗಸ್ಗೂರು: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಲು ವಿವಿಧ ರಾಜಕೀಯ ಪಕ್ಷಗಳ 7 ಜನ ಅಭ್ಯರ್ಥಿಗಳ ಪೈಕಿ 10 ನಾಮಪತ್ರ ಹಾಗೂ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು 6 ಜನ ಅಭ್ಯರ್ಥಿಗಳು ಇಲ್ಲಿಯವರೆಗೂ ನಾಮಪತ್ರ ಸಲ್ಲಿಸಿರುತ್ತಾರೆ.
ಲಿಂಗಸ್ಗೂರು ಕ್ಷೇತ್ರ: ಕೆಜೆಪಿದಿಂದ ಎಚ್.ಬಿ. ಮುರಾರಿ, ಕಾಂಗ್ರೆಸ್ನಿಂದ ನಾಗರಾಜ ತಿಪ್ಪಣ್ಣ, ಜೆಡಿಎಸ್ನಿಂದ ಮಾನಪ್ಪ ಡಿ. ವಜ್ಜಲ್ (2 ನಾಮಪತ್ರ ಸಲ್ಲಿಕೆ), ಬಿಜೆಪಿಯಿಂದ ತಿಪ್ಪಣ್ಣ ನಾಯಕ, ಬಿಎಸ್ಆರ್ ಪಕ್ಷದಿಂದ ಶಿದ್ಧಪ್ಪ ಬಂಡಿ ಹಾಗೂ ಗಂಗಮ್ಮ ಬಂಡಿ, ಕಾಂಗ್ರೆಸ್ ಪಕ್ಷದಿಂದ ದುರುಗಪ್ಪ ಹುಲಗೇರಿ ಸೇರಿದಂತೆ ಒಟ್ಟು 8 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಚ್.ಬಿ. ಮುರಾರಿ, ಮಾನಪ್ಪ ಡಿ.ವಜ್ಜಲ್, ಸಿದ್ದಪ್ಪ ಬಂಡಿ, ತಿಪ್ಪಣ್ಣ ನಾಯಕ ಇವರು ಪಕ್ಷದ ಬೀ-ಫಾರ್ಮ ನೀಡಿರುತ್ತಾರೆ. ಇನ್ನುಳಿದ ನಾಗರಾಜ ತಿಪ್ಪಣ್ಣ, ಗಂಗಮ್ಮ ಬಂಡಿ, ದುರುಗಪ್ಪ ಹುಲಗೇರಿ ಇವರು ಪಕ್ಷದ ಬೀ-ಫಾರ್ಮ ನೀಡಿರುವುದಿಲ್ಲವೆಂದು ಲಿಂಗಸ್ಗೂರು ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಟಿ.ಯೋಗೇಶ ತಿಳಿಸಿರುತ್ತಾರೆ.
ಮಸ್ಕಿ ಕ್ಷೇತ್ರ: ಜೆಡಿಎಸ್ನಿಂದ ದೊ.ಅಮರೇಶ ದಿನ್ನಿ ತಿಮ್ಮಪ್ಪ ನಾಯಕ, ಕೆಜೆಪಿಯಿಂದ ಮಹಾದೇವಪ್ಪಗೌಡ ಬಸನಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಪ್ರತಾಪಗೌಡ ನರಸನಗೌಡ, ಬಿಎಸ್ಆರ್ನಿಂದ ಶೇಖರಪ್ಪ ತಳವಾರ ನಿಂಗಪ್ಪ ಸೇರಿದಂತೆ ಒಟ್ಟು 4 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮಹಾದೇವಪ್ಪಗೌಡ, ಪ್ರತಾಪಗೌಡ ಹಾಗೂ ಶೇಖರಪ್ಪ ತಳವಾರ ಇವರು ಪಕ್ಷದ ಬೀ-ಫಾರ್ಮ ಸಲ್ಲಿಸಿರುತ್ತಾರೆ. ಇನ್ನುಳಿದ ದೊ. ಅಮರೇಶ ದಿನ್ನಿ ಇವರು ಪಕ್ಷದ ಬೀ-ಫಾರ್ಮ ಸಲ್ಲಿಸಿರುವುದಿಲ್ಲವೆಂದು ಮಸ್ಕಿ ಚುನಾವಣಾಧಿಕಾರಿ ಬಿ.ವೈ. ಶ್ರೀನಿವಾಸ ತಿಳಿಸಿರುತ್ತಾರೆ.
ಮಂಗಳವಾರ ಸಲ್ಲಿಕೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಲು 2 ಹಾಗೂ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು 2 ನಾಮಪತ್ರಗಳು ಮಂಗಳವಾರ ಸಲ್ಲಿಕೆಯಾಗಿರುತ್ತವೆ.
ಲಿಂಗಸ್ಗೂರು ಕ್ಷೇತ್ರದಿಂದ ಸ್ಪರ್ಧಿಸಲು ಸಿಪಿಎಂ ಪಕ್ಷದಿಂದ ಚಿನ್ನಪ್ಪ ಕೊಟ್ರಕಿ ಹಾಗೂ ಪಕ್ಷೇತರರಾಗಿ ನಂದಪ್ಪ ಬಾಂಬೆಕರ್ ವಕೀಲರು ನಾಮಪತ್ರ ಸಲ್ಲಿಸಿದ್ದಾರೆಂದು ಚುನಾವಣಾಧಿಕಾರಿ ಟಿ. ಯೋಗೇಶ ತಿಳಿಸಿದ್ದಾರೆ.
ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಎಸ್ಪಿಯಿಂದ ನಾಗರಾಜ ಬಸಪ್ಪ ಹಾಗೂ ಸಿಪಿಎಂನಿಂದ ನಾಗರಾಜ ಇವರು ನಾಮಪತ್ರ ಸಲ್ಲಿಸಿರುತ್ತಾರೆಂದು ಚುನಾವಣಾಧಿಕಾರಿ ವೈ.ಬಿ. ಶ್ರೀನಿವಾಸ ತಿಳಿಸಿದ್ದಾರೆ.