ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಧಾರ್ಮಿಕ ವಸಂತ ಶಿಬಿರ

Lingaraj Badiger
Updated On : 18 Apr 2013, 11:03 am

ಸಿಂಧನೂರು: ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮಮಂದಿರದ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ಧಾರ್ಮಿಕ ವಸಂತ ಶಿಬಿರವನ್ನು ಏ. 17ರಿಂದ ಆರಂಭವಾಗಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ರಂಗನಾಥಚಾರ್ಯ ಸಾಲಗುಂದಾ ತಿಳಿಸಿದ್ದಾರೆ. ಶಿಬಿರದಲ್ಲಿ ಮಹಿಳೆಯರಿಗೆ ಸ್ತ್ರೀಧರ್ಮ, ಸುಳಾದಿಗಳು, ಪುರುಷರಿಗೆ ದೇವರಪೂಜೆ, ಸೂಕ್ತಗಳು, ಬಾಲಕ, ಬಾಲಕಿಯರಿಗೆ ಸ್ತ್ರೀಧರ್ಮ, ದೇವರ ನಾಮಗಳು, ನಮ್ಮ ಸಂಸ್ಕೃತಿಗಳು, ಉಪನೀತ ಬಾಲಕರಿಗೆ ಸಂಧ್ಯಾವಂದನೆ, ದೇವರ ಪೂಜೆ, ವೇದ ಮಂತ್ರಗಳು, ಅನುಪನೀತ ಬಾಲಕರಿಗೆ ಸ್ತೋತ್ರಗಳು, ಮಂತ್ರಗಳನ್ನು ಕಲಿಸಿಕೊಡಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಪೇಜಾವರ ಶ್ರೀಗಳ ಶಿಷ್ಯಂದಿರಾದ ವಿಷ್ಣುಭೂಷಣ ತೀರ್ಥರು ಉದ್ಘಾಟಿಸಿದರು. ಶಿಬಿರದ ಮಾರ್ಗದರ್ಶಕರಾಗಿ ವಿಶ್ವೇಶತೀರ್ಥರು, ಮುಖ್ಯ ವ್ಯವಸ್ಥಾಪಕರಾಗಿ ವಿಜಯೀಂದ್ರಾಚಾರ್ಯ, ಸಂಚಾಲಕರಾಗಿ ಕೆ.ವಿ. ಸಂಜಯ ಕಾರ್ಯನಿರ್ವಹಿಸುವರು. ಶಿಬಿರವು 17ರಿಂದ 24 ರವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಗದಿತ ಸಮಯದಲ್ಲಿ ಜರುಗುವುದು.
ಇಂದು ಜಾತ್ರಾ ಮಹೋತ್ಸವ
ರಾಯಚೂರು: ನಗರದ ಆಫೀಸರ್ಸ್ ಕಾಲೋನಿಯ ಗುಡಗುಂಟಿ ಮರಿಸ್ವಾಮಿ ತಾತನವರ ಜಾತ್ರಾ ಮಹೋತ್ಸವ ಏ.18ರಂದು ನಡೆಯಲಿದೆ. ಅಂದು ಬೆಳಗ್ಗೆ 8ಕ್ಕೆ ಆಶಾಪುರ ರಸ್ತೆಯಲ್ಲಿನ ಆಫೀಸರ್ಸ್ ಕಾಲೋನಿಯ ಮಠದಲ್ಲಿ ರುದ್ರಾಭಿಷೇಕ ಹಾಗೂ ವಟುಗಳಿಗೆ ಅಯ್ಯಾಚಾರ ದೀಕ್ಷೆ ನಡೆಯಲಿದೆ. ಅದೇ ದಿನ ಸಂಜೆ 6ಕ್ಕೆ ಉಚ್ಚಾಯ ಮಹೋತ್ಸವ ನಡೆಯಲಿದೆ. ಏ.19ರಂದು ಸಂಜೆ 6ಕ್ಕೆ ಮಹಾರಥೋತ್ಸವ ನೆರವೇರಿಸಲಾಗುತ್ತದೆ.

ಮತದಾರರ ಜಾಗೃತಿ: ನಾಳೆ ಸ್ಪರ್ಧೆ
ರಾಯಚೂರು: ಮತದಾರರಲ್ಲಿ ಜಾಗೃತಿ ಮೂಡಿಸಲು ನಗರದ ಬಿಇಡಿ ಮತ್ತು ಡಿಇಡಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪಧೆಯನ್ನು ಆಯೋಜಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಸಹಾಯಕ ಆಯುಕ್ತೆ ಮಂಜುಶ್ರೀ ಅಧ್ಯಕ್ಷತೆಯನ್ನು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಏ. 19ರಂದು ನಗರದ ರಂಗಮಂದಿರದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದ ಹಿನ್ನಲೆಯಲ್ಲಿ ಬಿಇಡಿ ಮತ್ತು ಡಿಇಡಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸುವುದು, ಅದರಲ್ಲಿ 50 ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಂದು ಬೆಳಗ್ಗೆ 8ಕ್ಕೆ ರಂಗೋಲಿ ಸ್ಪರ್ಧೆಯನ್ನು ಆರಂಭಿಸಲಾಗುತ್ತದೆ. ಬೆ.11ರಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಭೆಗೆ ತಿಳಿಸಲಾಯಿತು. ಯುನಿಸೆಫ್ ಅಧಿಕಾರಿ ರಾಘವೆಂದ್ರ ಭಟ್, ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಟಿ.ರೋಣಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಶರಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಕನುಮಪ್ಪ, ಡಯಟ್ ಕಾಲೇಜಿನ ಹಿರಿಯ ಉಪಾನ್ಯಾಸಕ ಸಿ.ಬಿ. ಹಿರೇಮಠ, ವಿವಿಧ ಬಿಇಡಿ, ಡಿಇಡಿ ಕಾಲೇಜಿನ ಪ್ರಾಚಾರ್ಯರು ಸಭೆಯಲ್ಲಿದ್ದರು.
24ರಿಂದ ಹರಿದ್ವಾರದಲ್ಲಿ ಯೋಗ ಶಿಬಿರ
ಸಿಂಧನೂರು: ಪತಂಜಲಿ ಯೋಗ ಸಮಿತಿಯಿಂದ 18 ವರ್ಷ ಮೇಲ್ಪಟ್ಟು 40 ವರ್ಷದೊಳಗಿನ ಯುವಕ- ಯುವತಿಯರಿಗಾಗಿ ಹರಿದ್ವಾರದಲ್ಲಿ ಯೋಗಋಷಿ ಬಾಬಾರಾಮ ದೇವಜೀ ನೇತೃತ್ವದಲ್ಲಿ ಏ.24ರಿಂದ 30ರವರೆಗೆ ಯುವ ಭಾರತ್ ವಿಶೇಷ ಯೋಗ ಶಿಬಿರ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಎಂ.ಭಾಸ್ಕರ್ ತಿಳಿಸಿದ್ದಾರೆ. ಯುವಕ- ಯುವತಿಯರು ಹರಿದ್ವಾರಕ್ಕೆ ತೆರಳುತ್ತಿದ್ದು, ಸಾಧಕರು, ಯುವಕ- ಯುವತಿಯರು ತಮ್ಮ ಹೆಸರುಗಳನ್ನು ನೋಂದಾಯಿಸಲು ಕೋರಲಾಗಿದೆ. ವಿವರಕ್ಕೆ ಮೊ. 98860 99775, ಮೊ. 90191 12232, ಮೊ. 96111 43476 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement