ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೆಂಕಿ: ಲಕ್ಷಾಂತರ ಮೌಲ್ಯ ಆಸ್ತಿ ಹಾನಿ

Lingaraj Badiger
Updated On : 18 Apr 2013, 11:03 am

ರಾಯಚೂರು: ಮಾನವಿ ತಾಲೂಕಿನ ಅಲ್ದಾಳ್ ಕ್ಯಾಂಪಿನ ಮನೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ಆಸ್ತಿಗೆ ಹಾನಿಯಾಗಿದೆ. ಗ್ರಾಮದ ವೀರಭದ್ರಪ್ಪ ಎಂಬುವವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು, ಅಕ್ಕಪಕ್ಕದ ಗುಡಿಸಲುಗಳಿಗೆ ಬೆಂಕಿ ಹತ್ತಿ ಹುಲ್ಲಿನ ಬಣವಿಗಳಿಗೆ ಬೆಂಕಿ ಹೊತ್ತಿ ಪೂರ್ತಿ ಗುಡಿಸಲು, ಹುಲ್ಲಿನ ಬಣವೆ, ಮನೆಯಲ್ಲಿದ್ದ ಬಟ್ಟೆಬರೆ ಮತ್ತು ದವಸ ಧಾನ್ಯಗಳು ಹಾಗೂ ಒಂದು ಕರು ಆಹುತಿಯಾಗಿದ್ದು, ಒಟ್ಟು 10.91 ಲಕ್ಷ ಆಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: 2 ಹಸು ಸಾವು
ಸಿಂಧನೂರು: ಜಾನುವಾರು ಸಾಗಿಸುತ್ತಿದ್ದ ಟಂಟಂ ಸಿರವಾರದಿಂದ ಸಿಂಧನೂರಿಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಎರಡು ಹಸುಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಮಸ್ಕಿ ರಸ್ತೆಯ ಬಳಿ ಇರುವ ಎಸ್‌ಡಿಎಂಡಿ ಕಾಲೇಜು ಎದುರುಗಡೆ ಬುಧವಾರ ಸಂಭವಿಸಿದೆ. ಒಟ್ಟು 11 ಹಸುಗಳನ್ನು ಟಂಟಂ ಆಟೋದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸಾಯಿಖಾನೆಗೆ ಸಾಗಿಸಲು ಈ ರೀತಿಯಾಗಿ ಹಸುಗಳನ್ನು ಯರ್ರಾಬಿರ್ರಿಯಾಗಿ ಸಾಗಿಸುತ್ತಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಯುವ ಮುಖಂಡ ಸಿ.ಬಿ. ಸ್ವಾಮಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement