21ರಿಂದ ಮತಯಂತ್ರ ತರಬೇತಿ
ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಕಾರ್ಯದಲ್ಲಿ ನಿಯೋಜಿತ ಸಿಬ್ಬಂದಿಗೆ ಏ. 21ರಂದು ಜಿಲ್ಲೆಯ ವಿವಿಧೆಡೆ ತರಬೇತಿ ಆಯೋಜಿಸಲಾಗಿದೆ.
ವಿದ್ಯುನ್ಮಾನ ಮತಯಂತ್ರಗಳ ಕಾರ್ಯ ವಿಧಾನದ ಬಗ್ಗೆ ತರಬೇತಿ ನೀಡಲು ಜಿಲ್ಲೆಯಲ್ಲಿನ ಪ್ರೊಸೀಡಿಂಗ್ ಆಫೀಸರ್ ಹಾಗೂ ಸಹಾಯಕ ಪ್ರೊಸೀಡಿಂಗ್ ಆಫೀಸರ್ಗಳಿಗೆ ಪ್ರತಿ ತಾಲೂಕಿನಲ್ಲಿ ಈ ತರಬೇತಿ ಆಯೋಜಿಸಿದ್ದು, ಏ. 21ರಿಂದ 23ರವರೆಗೆ ರಾಯಚೂರು ಗ್ರಾಮೀಣ ಹಾಗೂ ರಾಯಚೂರು ನಗರ ಕ್ಷೇತ್ರದ ಸಿಬ್ಬಂದಿಗೆ ಬೆಳಗ್ಗೆ 10ರಿಂದ ರಂಗಮಂದಿರದಲ್ಲಿ ತರಬೇತಿ ಆಯೋಜಿಸಲಾಗಿದೆ.
ಅದೇ ರೀತಿ ಏ. 22ರಂದು ಮಾನವಿಯ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗ್ಗೆ 10ಕ್ಕೆ ಹಾಗೂ ಅದೇ ದಿನ ದೇವದುರ್ಗದ ಭಾರತ್ ಚಿತ್ರಮಂದಿರದಲ್ಲಿ ಬೆಳಗ್ಗೆ 10ಕ್ಕೆ ಹಾಗೂ ಸಿಂಧನೂರಿನ ಕೂಡಲಸಂಗಮೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 10ಕ್ಕೆ ತರಬೇತಿ ಆಯೋಜಿಸಲಾಗಿದೆ.
ಅದೇ ರೀತಿ ಏ.21 ಹಾಗೂ 22ರಂದು ಲಿಂಗಸ್ಗೂರು ಮತ್ತು ಮಸ್ಕಿ ಕ್ಷೇತ್ರದ ತರಬೇತಿಯನ್ನು ಬೆಳಗ್ಗೆ 10ಕ್ಕೆ ಲಿಂಗಸ್ಗೂರಿನ ಎಂಪೈರ್ ಚಿತ್ರಮಂದಿರದಲ್ಲಿ ಆಯೋಜಿಸಿದ್ದು, ಜಿಲ್ಲೆಯ ಎಲ್ಲ ಪ್ರೊಸೀಡಿಂಗ್ ಆಫೀಸರ್ ಹಾಗೂ ಸಹಾಯಕ ಪ್ರೊಸೀಡಿಂಗ್ ಆಫೀಸರ್ಗಳು ಮೊದಲನೆಯ ಹಂತದ ತರಬೇತಿಗಾಗಿ ನಿಗದಿತ ದಿನದಂದು ಹಾಜರಿರಲು ಸೂಚಿಸಲಾಗಿದೆ.
ತರಬೇತಿಗೆ ಗೈರು ಹಾಜರಾಗುವವರನ್ನು ಶಿಸ್ತುಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಮ್ಮಪ್ಪ ಎಚ್ಚರಿಸಿದ್ದಾರೆ.
ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ
ಸಿಂಧನೂರು: ನಗರದ ಸಂಕೇತ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಮತದಾನ ಜಾಗೃತಿ ಜಾಥಕ್ಕೆ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಶರಣಪ್ಪ ಚಾಲನೆ ನೀಡಿದರು. ಮತದಾನದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿಭಾಗದ ಎನ್ಎಸ್ಎಸ್ ಸಂಯೋಜನಾಧಿಕಾರಿ ಎಸ್. ಶಿವರಾಜ, ಪೈದೊಡ್ಡಿ ಶಾಲೆ ಮುಖ್ಯೋಪಾಧ್ಯಾಯ ಬಸವರಾಜ, ಜಮೀಲ್ ಅಹ್ಮದ್, ಪ್ರಾಚಾರ್ಯ ಶ್ರೀಧರ ಮತ್ತಿತರರು ಪಾಲ್ಗೊಂಡಿದ್ದರು.