ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕೈ' ಹಿಂದುಳಿದ ವರ್ಗದವರ ಆಶಾಕಿರಣ

Lingaraj Badiger
Updated On : 19 Apr 2013, 11:39 am

ಸಿಂಧನೂರು: ಕಾಂಗ್ರೆಸ್ ಹಿಂದುಳಿದ ವರ್ಗದವರ ಆಶಾಕಿರಣವಾಗಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ನೂತನ ತಾಲೂಕಾಧ್ಯಕ್ಷ ಹಾಗೂ ಗಂಗಾಮತ ಸಮಾಜದ ರಾಜ್ಯ ಉಪಾಧ್ಯಕ್ಷ ಎಸ್.ಪಿ. ನಾಗರಾಜ ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಗಂಗಾಮತ ಸಮಾಜದ ನಾಲ್ವರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಗುರುಮಠಕಲ್‌ನಿಂದ ಬಾಬುರಾವ್ ಚಿಂಚನಸೂರ, ಸಿಂದಗಿಯಿಂದ ಶರಣಪ್ಪ ಸುಣಗಾರ, ಬಸವಕಲ್ಯಾಣದಿಂದ ಬಿ.ನಾರಾಯಣರಾವ್, ಉಡುಪಿಯಿಂದ ಪ್ರಮೋದ ಮಧ್ವರಾಜ ಸ್ಪರ್ಧಿಸಿದ್ದಾರೆ. ಗುರುಮಠಕಲ್‌ನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಾಯಿಬಣ್ಣ ಬೋರಬಂಡಾ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಆದರೆ ತಾವು ಹಾಗೂ ಸಮಾಜದ ಮುಖಂಡರು ಅವರ ಮನವೊಲಿಸಿ ಸ್ಪರ್ದಿಸದಂತೆ ನೋಡಿಕೊಂಡೆವು ಎಂದು ವಿವರಿಸಿದರು. ಕಾಂಗ್ರೆಸ್ ಕಳೆದ 60 ವರ್ಷಗಳಿಂದ ದೇಶದ ಹಿಂದುಳಿದ, ಅಲ್ಪಸಂಖ್ಯಾತರ, ಹರಿಜನ- ಗಿರಿಜನರ ಅಭಿವೃದ್ಧಿಗೆ ಶ್ರಮಿಸಿದೆ. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಹ ಅಲ್ಪಸಂಖ್ಯಾತರ, ಹಿಂದುಳಿದ, ನಿಮ್ನ ವರ್ಗದವರಿಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು. ನಗರಸಭೆ ಸದಸ್ಯರಾದ ಜಾಫರ್ ಜಾಗೀರದಾರ, ಪ್ರಭುರಾಜ, ಎಂ.ಅಮರೇಗೌಡ, ಪಂಪನಗೌಡ ಬಾದರ್ಲಿ, ಶಿವಕುಮಾರ ಜವಳಿ, ಶಂಕರಗೌಡ ನಾಡಂಗ, ಗಂಗಾಮತ ಸಮಾಜದ ಮುಖಂಡರಾದ ರಾಮಣ್ಣ ಜವಳಗೇರಾ, ಡ್ರೈವರ್ ಕೃಷ್ಣ, ಮೌಲಪ್ಪ ಹಟ್ಟಿ, ಹನುಮಂತಪ್ಪ ಜನತಾ ಕಾಲೋನಿ, ವೀರೇಶ ವಂಟಿಗೇರ ಮತ್ತಿತರರು ಇದ್ದರು.
ಸಿಂಧನೂರಿಗೆ ಸಿದ್ದು, ಇಬ್ರಾಹಿಂ
ಸಿಂಧನೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಚಿತ್ರನಟಿಯರಾದ ರಮ್ಯಾ, ಭಾವನಾ ಆಗಮಿಸಲಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಅವರ ಪರವಾಗಿ ಚುನಾವಣಾ ಪ್ರಚಾರಾರ್ಥ ಬಹಿರಂಗ ಸಭೆಯನ್ನುದ್ದೇಶಿಸಿ ಏ.19ರಂದು ಮಾತನಾಡುವರು. ಬೆಳಿಗ್ಗೆ 10.30ಕ್ಕೆ ನಗರದ ಆರ್‌ಜಿಎಂ ಮೈದಾನದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವರು. ಸಭೆಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನ ಬಾದರ್ಲಿ ಕೋರಿದ್ದಾರೆ.
ಸ್ಪರ್ಧಾಳುಗಳ ಗೈರು
ಂಧನೂರು: ತಾಲೂಕಿನಲ್ಲಿ ನಡೆವ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಸ್ಪರ್ಧಿಸುತ್ತಿದ್ದ ಸ್ಪರ್ಧಾಳುಗಳು ಈ ಚುನಾವಣೆಯಲ್ಲಿ ಸ್ಪರ್ಧೆಸದಿರುವುದು ವಿಶೇಷವಾಗಿದೆ. ಸಿಂಧನೂರಿನ ಜೈನ್ ಸಮುದಾಯದ ಹುಲಿಶೇಠ್, ವಳಬಳ್ಳಾರಿಯ ಮುಕ್ಕಣ್ಣ ಮತ್ತು ಸುಕಾಲಪೇಟೆಯಿಂದ ಮಾರೆಮ್ಮ ವೆಂಕೋಬ ಅವರು ಸ್ಪರ್ಧಿಸಿ ಮಾಧ್ಯಮಗಳ ಸುದ್ದಿಗೆ ಗ್ರಾಸವಾಗುತ್ತಿದ್ದರು. ಆದರೆ ಇವರಲ್ಲಿ ಹುಲಿಶೇಠ್, ಮುಕ್ಕಣ್ಣ ಮೃತಪಟ್ಟಿದ್ದಾರೆ. ಉಳಿದಂತೆ ಮಾರೆಮ್ಮ ಸ್ಪರ್ಧೆಸಿಲ್ಲ. ಪ್ರತಿ ಚುನಾವಣೆಯಲ್ಲಿ ಸ್ಪರ್ಧೆಸುತ್ತಿದ್ದ ಇವರ ಗೈರಿನ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement