ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅನೂಷಾಗೆ ಚಿನ್ಮಯ ಪ್ರಶಸ್ತಿ

Rashmi Kasaragodu
Updated On : 20 Apr 2013, 11:38 am

ಗುಲ್ಬರ್ಗ: ನಗರದಲ್ಲಿ ಇತ್ತೀಚೆಗೆ ಡಾ. ಪಿ.ಎಸ್. ಶಂಕರ ಪ್ರತಿಷ್ಠಾನ, ಗುರು ಪುಟ್ಟರಾಜ ಸಂಗೀತ ವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ಚೈತ್ರೋತ್ಸವ ಸಮಾರಂಭದಲ್ಲಿ ಅನೂಷಾ ಎಸ್. ಭಟ್ ಅವರಿಗೆ ಡಾ. ಪಿ.ಎಸ್. ಶಂಕರ ಚಿಗುರು ಚಿನ್ಮಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ್, ಬಾಬುರಾವ ಯಡ್ರಾಮಿ, ವಿ.ಎಸ್. ಚಿತ್ತಾರಿ, ಬಸವರಾಜ ಕೋನೆಕ್ ಇತರರು ಇದ್ದರು.
ನಗರದ ಸೇಂಟ್ ಮೇರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಈ ಬಾಲಕಿ 9ನೇ ದಕ್ಷಿಣ ಭಾರತದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾಳೆ. ಸ್ವಾಮಿ ವಿವೇಕಾನಂದ ವಿಶ್ವ ಪ್ರಕೃತಿ ಯೋಗ ಕೇಂದ್ರ ಬೆಂಗಳೂರು ಅವರು ಆಯೋಜಿಸಿದ ಯೋಗ ಉತ್ಸವದಲ್ಲಿ ಕರ್ನಾಟಕ ಮತ್ತು ಭಾರತ ಯೋಗ ನಿಧಿ ಪುರಸ್ಕಾರ, ರಾಷ್ಟ್ರೀಯ ಹಿಮಾಲಯ ಯೋಗ ಓಲಿಂಪಿಯಾಡ್ ಸ್ಫರ್ಧೆಯಲ್ಲಿ ದ್ವಿತೀಯ ಬಹುಮಾನ ಮತ್ತು 4ನೇ ಸ್ಥಾನ ಪಡೆದುಕೊಂಡಿದ್ದಾಳೆ. 10ನೇ ದಕ್ಷಿಣ ಭಾರತ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡು ಪ್ರಥಮ, ಎರಡು ದ್ವಿತೀಯ ಹಾಗೂ ಒಂದು ತೃತೀಯ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾಳೆ.
ಭಾರತ ಯೋಗ ಫೆಡರೇಶನ್ ಅವರು ಬೆಂಗಳೂರಿನಲ್ಲಿ ಏರ್ಪಡಿಸಿದ ಯೋಗ ರಾಣಿಯರು ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಅವಾರ್ಡ್ ಪಡೆದಿದ್ದಾಳೆ. ತಮಿಳುನಾಡಿನ ಕಾಂಚಿಪುರದಲ್ಲಿ ಏರ್ಪಡಿಸಿದ 14ನೇ ದಕ್ಷಿಣ ಭಾರತ ಯೋಗ ಚಾಂಪಿಯನ್ಶಿಪ್ ಸ್ಫರ್ಧೆಯಲ್ಲಿ ಎರಡು ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement