ಅಭಿವೃದ್ಧಿಗೆ ಬಿಎಸ್ಆರ್ ಬೆಂಬಲಿಸಿ: ಕರಿಯಪ್ಪ
ಸಿಂಧನೂರು: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಬಿಎಸ್ಆರ್ ಕಾಂಗ್ರೆಸ್ ಬೆಂಬಲಿಸುವಂತೆ ಪಕ್ಷದ ಅಭ್ಯರ್ಥಿ ಕೆ.ಕರಿಯಪ್ಪ ಮನವಿ ಮಾಡಿದರು. ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡಿದ ಅವರು ಹಂಪನಗೌಡರು ಮೂರು ಬಾರಿ ಶಾಸಕರಾಗಿದ್ದ ಸಮಯದಲ್ಲಿ ಮಾಡಿದ ಅಭಿವೃದ್ಧಿಯನ್ನು ನೋಡಿದ್ದೀರಿ. ಒಂದು ಬಾರಿ ಶಾಸಕರಾಗಿ ನಾಡಗೌಡ ಮಾಡಿದ್ದನ್ನು ನೋಡಿದ್ದೀರಿ. ಎಲ್ಲ ಜ್ವಲಂತ ಸಮಸ್ಯೆಗಳು ಹಾಗೆ ಉಳಿದಿವೆ. ಕಾರಣ ಆ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಈ ಬಾರಿ ತಮ್ಮನ್ನು ಗೆಲ್ಲಿಸುವಂತೆ ಅವರು ವಿನಂತಿಸಿದರು. ರಂಗನಗೌಡ ಗೊರೇಬಾಳ, ಹರ್ಷ, ಮೈನುದ್ದೀನ್ ಇದ್ದರು.