ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಟೋ ಚಾಲಕರ ಸಮಿತಿ ರಚನೆ

Rashmi Kasaragodu
Updated On : 20 Apr 2013, 11:38 am

ಗುಲ್ಬರ್ಗ: ನಗರದ ರೋಜಾ (ಬಿ)ಯಲ್ಲಿ ವಿವಿಧ ಬಡಾವಣೆಯ ಆಟೋ ಚಾಲಕರ ಸಭೆಯಲ್ಲಿ ಆಟೋ ಚಾಲಕರ ಸಮಿತಿ ರಚಿಸಲಾಯಿತು. ಈ ಸಭೆಯಲ್ಲಿ ಜಗನ್ನಾಥ ಹುಲಿ, ಸಾಜೀದ್ ಅಹ್ಮದ್ ದಿಗ್ಗಾಂವಕರ್, ಮಹ್ಮದ್ ರಹಿಮುದ್ದೀನ್, ಮಹ್ಮದ್ ವಲಿಯೋದ್ದೀನ್, ರಾಜು ಕಂಚಗಾರ, ನಾಗರಾಜ ಕಟ್ಟಿ, ಮಾರುತಿ ಗೌಳಿ ಭಾಗವಹಿಸಿದ್ದರು.
 ಗೌರವ ಅಧ್ಯಕ್ಷರಾಗಿ ಸಾಜೀದ್ ಅಹ್ಮದ್ ದಿಗ್ಗಾಂವಕರ್, ಅಧ್ಯಕ್ಷ ಮಹ್ಮದ್ ರಹಿಮೊದ್ದೀನ್, ಪ್ರಧಾನ ಕಾರ್ಯದರ್ಶಿ ಮಹ್ಮದ್ ವಲಿಯೋದ್ದೀನ್, ಉಪಾಧ್ಯಕ್ಷರಾಗಿ ಮಹ್ಮದ್ ಇಕ್ಬಾಲ್ ಹಾಗೂ ಮಶಾಕ್ ಪಟೇಲ್, ಸಹ ಕಾರ್ಯದರ್ಶಿ ಸೈಯದ್ ದಸ್ತಗಿರ ಷಾ ಹಾಗೂ ಸೈಯದ್ ಮಹಿನೋದ್ದೀನ್, ಅಬ್ದುಲ್ ಸಮದ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಅಶ್ರಫ್ ಅಲಿ, ಅಬ್ದುಲ್ ಸತ್ತಾರ, ಖಾಜಾ ಪಾಶಾ, ಅಬ್ದುಲ್ ರಹಿಮಾನ್, ಮಹ್ಮದ್ ಯಾಸೀನ್, ಗರೀಬ ಷಾ, ಶಬ್ಬೀರ್ ಅಹ್ಮದ್, ಮಹ್ಮದ್ ಹಬೀಬ್, ಸಲೀಮ್, ಮಹ್ಮದ್ ಮನಸೂರ ಅಲಿ, ಅಬ್ದುಲ್ ಸತ್ತಾರ ಷಾ, ಮಹಿಮೂದ್, ಜಮೀರ್, ಚಾಂದಪಾಶಾ, ಜಹೀರ್ ಪಾಶಾ, ಖಾಜಾಪಾಶಾ, ಮಹ್ಮದ್ ನಾಸೀರ್, ಜಗನ್ನಾಥ ಹುಲಿ, ರಾಜು ಕಂಚುಗಾರ, ಮಾರುತಿ ಗೌಳಿ, ಗುರು ಕಠಾರೆ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಯಿತು.
ಹಾಲುಮತ ಸಮಾಜಕ್ಕೆ ಆಯ್ಕೆ
ಸೇಡಂ: ಕರ್ನಾಟಕ ಪ್ರದೇಶ ಹಾಲುಮತ(ಕುರುಬ) ಸಮಾಜದ ತಾಲೂಕಿನ ನೂತನ ಅಧ್ಯಕ್ಷರಾಗಿ ಅಯ್ಯಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ. ಇಲ್ಲಿನ ಜಟ್ಟಿಲಿಂಗೇಶ್ವರ ದೇವಸ್ಥಾನ(ಕನಕಗುರು ಪೀಠದಲ್ಲಿ) ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬೀರಪ್ಪ ಪೂಜಾರಿ ಬೀರನಳ್ಳಿ(ಉಪಾಧ್ಯಕ್ಷ), ಮಾಳಪ್ಪ ಪೂಜಾರಿ ತೋಟನಳ್ಳಿ(ಕಾರ್ಯಾಧ್ಯಕ್ಷ), ಶಿವಾನಂದ ಹೊಸಮನಿ ಕಲಕಂ(ಪ್ರಧಾನ ಕಾರ್ಯದರ್ಶಿ), ಕಾರ್ಯದರ್ಶಿಗಳನ್ನಾಗಿ ಅರುಣಕುಮಾರ ಪೂಜಾರಿ, ನಾಗರಾಜ ಪೂಜಾರಿ ಮಳಖೇಡ ಅವರನ್ನು ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಮರತೂರ, ಉಪಾಧ್ಯಕ್ಷ ವಸಂತ ಬನ್ನೂರಕರ್, ತಾಲೂಕು ಮಾಜಿ ಅಧ್ಯಕ್ಷ ರಾಮಲಿಂಗಪ್ಪ ಹೆಡ್ಡಳ್ಳಿಕರ್ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement