ತಪಾಸಣೆ ಶಿಬಿರ
ಗುಲ್ಬರ್ಗ: ಆರು ವರ್ಷದೊಳಗಿನ ಮಕ್ಕಳ, ಗರ್ಭಿಣಿಯರ ಮತ್ತು ಬಾಣಂತಿಯರ ಆರೋಗ್ಯ ತಪಾಸಣೆಯನ್ನು ಎರಡು ತಿಂಗಳಿಗೊಮ್ಮೆ ನಡೆಸುವಂತೆ ಉಚ್ಚ ನ್ಯಾಯಾಲಯವು ಸೂಚಿಸಿರುವ ಹಿನ್ನೆಲೆಯಲ್ಲಿ ಏಪ್ರಿಲ್ದಿಂದ ಡಿಸೆಂಬರ್ವರೆಗೆ ಆರೋಗ್ಯ ತಪಾಸಣೆಯ ದಿನಚರಿಯನ್ನು ರೂಪಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಗುಲ್ಬರ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ತಪಾಸಣಾ ಶಿಬಿರದ ವಿವರ ಇಂತಿದೆ. ಅಂಗನವಾಡಿಗಳ 6 ವರ್ಷದ ಮಕ್ಕಳ ಆರೋಗ್ಯ ತಪಾಸಣೆ- ಏ.22, ಜೂನ್ 3, ಆಗಸ್ಟ್ 3, ಅಕ್ಟೋಬರ್ 3, ಡಿಸೆಂಬರ್ 2. ಗ್ರಾಮೀಣ ಪ್ರದೇಶಗಳಲ್ಲಿ, ಅಂಗನವಾಡಿಗಳ ಹೊರಗಿರುವ 6 ವರ್ಷದ ಮಕ್ಕಳ ಆರೋಗ್ಯ ತಪಾಸಣೆ- ಏ. 24, ಜೂನ್ 5, ಆಗಸ್ಟ್ 6, ಅಕ್ಟೋಬರ್ 5 ಮತ್ತು ಡಿಸೆಂಬರ್ 4. ನಗರ ಪ್ರದೇಶಗಳಲ್ಲಿ 6 ವರ್ಷದ ಮಕ್ಕಳ, ಗರ್ಭಿಣಿಯರ ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ತಪಾಸಣೆ- ಏಪ್ರಿಲ್ 26, ಜೂನ್ 7, ಆಗಸ್ಟ್ 8, ಅಕ್ಟೋಬರ್ 7 ಮತ್ತು ಡಿಸೆಂಬರ್ 6.
ಅಂಗನವಾಡಿ ಕಾರ್ಯಕರ್ತೆಯರು 6 ವರ್ಷದ ಮಕ್ಕಳ, ಗರ್ಭಿಣಿಯರ, ಬಾಣಂತಿಯರ ಮನೆಗಳಿಗೆ ತೆರಳಿ ನಿಗದಿತ ದಿನಾಂಕಗಳಂದು ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಉಪ ನಿರ್ದೇಶಕಿ ರತ್ನಾ ಬಿ. ಕಲಂದಾನಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.